alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಯಾರ್ಕ್ ನಲ್ಲಿ ಟ್ರಕ್ ದಾಳಿಗೆ ಹರಿಯಿತು ನೆತ್ತರು

ನ್ಯೂಯಾರ್ಕ್: ಇತ್ತೀಚೆಗೆ ಗುಂಡಿನ ಬದಲು ಟ್ರಕ್ ನುಗ್ಗಿಸುವ ಮೂಲಕ ಉಗ್ರರು ದಾಳಿ ನಡೆಸುತ್ತಿದ್ದು, ಅದೇ ರೀತಿ ನ್ಯೂಯಾರ್ಕ್ ಮ್ಯಾನ್ ಹಟ್ಟನ್ ನಲ್ಲಿ ಉಗ್ರನೊಬ್ಬ ಪೈಶಾಚಿಕ ಕೃತ್ಯವೆಸಗಿದ್ದಾನೆ.

ಸೈಕಲ್ ಪಾತ್ ಮೇಲೆ ಅಡ್ಡಾದಿಡ್ಡಿಯಾಗಿ ಟ್ರಕ್ ನುಗ್ಗಿಸಿ, 8 ಮಂದಿಗೆ ಸಾವಿಗೆ ಕಾರಣವಾಗಿದ್ದಾನೆ. ದಾಳಿ ನಡೆಸಿದ ಉಗ್ರನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಈತನನ್ನು 2010 ರಲ್ಲಿ ಉಜ್ಬೆಕಿಸ್ತಾನದಿಂದ ವಲಸೆ ಬಂದಿದ್ದ ಸೈಫುಲ್ಲಾ ಹಬೀಬುಲ್ಲೆವಿಕ್ ಸೈಫೋವ್ ಎಂದು ಗುರುತಿಸಲಾಗಿದೆ.

ಫ್ಲೋರಿಡಾದ ಚಾಲನಾ ಪರವಾನಿಗಿ ಹೊಂದಿರುವ ಸೈಫುಲ್ಲಾ, ನ್ಯೂಜೆರ್ಸಿಯ ಪ್ಯಾಟರ್ಸ್ ನಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದಾನೆ. ಈತ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದನೆಂದು ಶಂಕಿಸಲಾಗಿದೆ.

ಸೈಫುಲ್ಲಾ ಬಾಡಿಗೆ ಟ್ರಕ್ ಪಡೆದು ಬಂದಿದ್ದು ಸೈಕಲ್ ಸವಾರರ ಮೇಲೆ ನುಗ್ಗಿಸಿದ್ದಾನೆ. ಟ್ರಕ್ ಗಾಲಿಗೆ ಸಿಲುಕಿ 8 ಮಂದಿ ಸಾವನ್ನಪ್ಪಿದ್ದು, 15 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಅಡ್ಡಾದಿಡ್ಡಿಯಾಗಿ ಚಲಿಸಿದ ಟ್ರಕ್ ವಾಹನಗಳಿಗೆ ಗುದ್ದಿ ನಿಂತಿದೆ. ಅದರಿಂದ ಕೆಳಗಿಳಿದ ಸೈಫುಲ್ಲಾ ಗನ್ ತೋರಿಸಿ ಜನರನ್ನು ಬೆದರಿಸಿದ್ದು, ಪೊಲೀಸರು ಫೈರಿಂಗ್ ಮಾಡಿ ಆತನನ್ನು ಹತ್ಯೆ ಮಾಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ರಕ್ಷಣಾ ಕಾರ್ಯ ನಡೆದಿದೆ ಎಂದು ನ್ಯೂಯಾರ್ಕ್ ಸಿಟಿ ಮೇಯರ್ ಬಿಲ್ ಡಿ ಬ್ಲೆಸಿಯೊ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...