alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾದ ಫ್ಯಾಷನ್: ಕೆಳ ಭಾಗಕ್ಕೆ ಬಂತು ಜೀನ್ಸ್ ಜೇಬು

ಫ್ಯಾಷನ್ ಜಗತ್ತು ವೇಗವಾಗಿ ಬದಲಾಗ್ತಿದೆ. ಫ್ಯಾಷನ್ ಯಾವುದು ಎಂಬುದೇ ಅರ್ಥವಾಗ್ತಿಲ್ಲ. ವಿನ್ಯಾಸಕಾರರು ಹೊಸ ಹೊಸ ಪ್ರಯೋಗ ಮಾಡಿ ಚಿತ್ರ-ವಿಚಿತ್ರ ಬಟ್ಟೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ವಿನ್ಯಾಸಕಾರರು ಜೀನ್ಸ್ ಉಲ್ಟಾ ಸ್ಟಿಚ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜೇಬು ಕೆಳಭಾಗದಲ್ಲಿರುವ ಜೀನ್ಸ್ ಫೋಟೋ ವೈರಲ್ ಆಗಿದೆ.

ನ್ಯೂಯಾರ್ಕ್ ನ CIE Denim ಹೆಸರಿನ ಕಂಪನಿ ಹೈ ರೈಸ್ ಜೀನ್ಸ್ ವಿನ್ಯಾಸಗೊಳಿಸಿದೆ. ಇದ್ರಲ್ಲಿ ಜೀನ್ಸನ್ನು ಉಲ್ಟಾ ವಿನ್ಯಾಸ ಮಾಡಲಾಗಿದೆ. ಬೆಲ್ಟ್ ಹಾಗೂ ಜೇಬು ಸೊಂಟದ ಬದಲು ಪಾದದ ಬಳಿಯಿದೆ. ಅಮೆರಿಕಾ ಹಾರರ್ ವೆಬ್ ಸರಣಿ ಸ್ಟ್ರೇಂಜರ್ ಥಿಂಗ್ಸ್ ನಿಂದ ಸ್ಪೂರ್ತಿಗೊಂಡು ಈ ಜೀನ್ಸ್ ವಿನ್ಯಾಸ ಮಾಡಲಾಗಿದೆ.

ಈ ಜೀನ್ಸ್ ಗೆ Will ಎಂದು ಹೆಸರಿಡಲಾಗಿದೆ. ಬೇರೆ ಬೇರೆ ವಿನ್ಯಾಸಕ್ಕೆ ಬೇರೆ ಬೇರೆ ಹೆಸರಿಡಲಾಗಿದೆ. Lucas, Mike, Nancy  ಮತ್ತು Maxine ಎಂಬ ಹೆಸರೂ ಇದೆ. ಈ ಜೀನ್ಸ್ ಗಳ ಬೆಲೆ 495 ಡಾಲರ್ ಸುಮಾರು 33,905 ರೂಪಾಯಿಯಾಗಿದೆ. ಶರ್ಟ್ ಕೂಡ ವಿನ್ಯಾಸಗೊಳಿಸಲಾಗಿದ್ದು, ಅದ್ರ ಜೇಬು ಕೂಡ ಕೆಳಗಿದೆ. ಅದ್ರ ಬೆಲೆ 26,370 ರೂಪಾಯಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...