alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆಯಲ್ಲಿ ನಕಲು ಮಾಡಲು ಈಕೆ ಅನುಸರಿಸಿದ್ದಾಳೆ ಹೊಸ ವಿಧಾನ

nails_cheating_2017621_18322_21_06_2017

ಪರೀಕ್ಷೆ ಹಾಲ್ ನಲ್ಲಿ ಅನೇಕ ವಿದ್ಯಾರ್ಥಿಗಳು ನಕಲು ಮಾಡ್ತಾರೆ. ಸಾಮಾನ್ಯವಾಗಿ ಮಕ್ಕಳು ಹೇಗೆ ನಕಲು ಮಾಡ್ತಾರೆಂಬುದು ಶಿಕ್ಷಕರಿಗೆ ತಿಳಿದಿರುತ್ತದೆ. ಹಾಗಾಗಿ ನಕಲು ಮಾಡುವ ವಿದ್ಯಾರ್ಥಿಗಳು ಶಿಕ್ಷಕರ ಕೈಗೆ ಸಿಕ್ಕಿ ಬೀಳ್ತಾರೆ. ಆದ್ರೆ ಕಾಲ ಬದಲಾಗಿದೆ. ಶಿಕ್ಷಕರಿಗೆ ಚಳ್ಳೆ ಹಣ್ಣು ತಿನ್ನಿಸಿ ನಕಲು ಮಾಡುವ ಹೊಸ ಹೊಸ ವಿಧಾನವನ್ನು ಮಕ್ಕಳು ಅನುಸರಿಸುತ್ತಿದ್ದಾರೆ.

ಲಂಡನ್ ನ ಆಂಡ್ರ್ಯೂ ಹೆಸರಿನ ವಿದ್ಯಾರ್ಥಿನಿಯೊಬ್ಬಳು ಭೌತಶಾಸ್ತ್ರ ಪರೀಕ್ಷೆಯಲ್ಲಿ ನಕಲು ಮಾಡಲು ಅನನ್ಯ ವಿಧಾನ ಅನುಸರಿಸಿದ್ದಾಳೆ. ನಕಲಿಗೆ ಸಹಾಯ ಮಾಡಿದ್ದು ಆಕೆಯ ಉದ್ದನೆಯ ಉಗುರು. ದೊಡ್ಡ ದೊಡ್ಡ ಫಾರ್ಮೂಲಾಗಳನ್ನು ಚೀಟಿಯಲ್ಲಿ ಬರೆದು ಆ ಚೀಟಿಯನ್ನು ತನ್ನ ಉದ್ದ ಉಗುರಿನಡಿ ಅಂಟಿಸಿಕೊಂಡಿದ್ದಳಂತೆ. ಉಗುರಿನಡಿ ಚೀಟಿ ಅಂಟಿಸಿಕೊಂಡು ಚೀಟ್ ಮಾಡ್ತಾರೆ ಅಂತಾ ಶಿಕ್ಷಕರು ಯೋಚನೆ ಕೂಡ ಮಾಡೋದಿಲ್ಲ. ಹಾಗಾಗಿ ಉಗುರಿನ ತಪಾಸಣೆ ಮಾಡೋದಿಲ್ಲ.

ಪರೀಕ್ಷೆ ನಂತ್ರ ತಾನು ಮಾಡಿದ ಮಹಾನ್ ಕೆಲಸವನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ ಆಂಡ್ಯ್ರೂ. ಇದನ್ನು ನೋಡಿದ ಅನೇಕ ಹುಡುಗಿಯರು ತಾವೂ ಉದ್ದನೆಯ ಉಗುರು ಬೆಳೆಸುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...