alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ರೂಪದಲ್ಲಿ ಬರುತ್ತಿದೆ ವಯಾಗ್ರ

ವ಻ಯ಻ಗರ಻

ಲಂಡನ್: ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ ಕಾಮೋತ್ತೇಜಕ ಶಕ್ತಿಯನ್ನು ಹೆಚ್ಚಿಸುತ್ತಿದ್ದ ವಯಾಗ್ರ ಹೊಸ ರೂಪದಲ್ಲಿ ಬರುತ್ತಿದೆ. ವಯಾಗ್ರ ಮಾತ್ರೆಯ ಪ್ರಯೋಜನ ಪಡೆದುಕೊಳ್ಳಲು ಲೈಂಗಿಕ ಕ್ರಿಯೆಗೂ ಒಂದು ಗಂಟೆಯ ಮೊದಲು ಮಾತ್ರೆ ಸೇವಿಸಬೇಕಿತ್ತು.

ಹೊಸ ವಯಾಗ್ರ ಪ್ಲಾಸ್ಟರ್ ರೂಪದಲ್ಲಿದ್ದು, ಈ ಸ್ಟಿಕರ್ ಅನ್ನು ದೇಹಕ್ಕೆ ಅಂಟಿಸಿಕೊಂಡರೆ ಕ್ಷಣಾರ್ಧದಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲಿದೆ. ಮಾತ್ರವಲ್ಲ ಸುಮಾರು 10 ಗಂಟೆ ಅವಧಿಯವರೆಗೂ ಅದರ ಪ್ರಭಾವ ಇರುತ್ತದೆ ಎನ್ನಲಾಗಿದೆ. ಮಾತ್ರೆಗಳ ರೂಪದಲ್ಲಿ ಲಭ್ಯವಿದ್ದ ವಯಾಗ್ರದ ಕುರಿತಾಗಿ ಹಲವು ಸಂಶೋಧನೆ ನಡೆದಿದ್ದು, ಮಾತ್ರೆ ಬದಲಿಗೆ ಸ್ಪ್ರೇ ರೀತಿಯ ಔಷಧ ಮೊದಲಾದವುಗಳನ್ನು ಬಳಸಲಾಗುತ್ತಿದೆ. ಆದರೆ, ಅವುಗಳಿಂದ ಅಡ್ಡ ಪರಿಣಾಮ ಉಂಟಾಗುತ್ತದೆ ಎನ್ನಲಾಗಿದೆ.

ಇದೀಗ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕಾಮೋತ್ತೇಜಕ ವಯಾಗ್ರ ಸ್ಟಿಕರ್ ಅನ್ನು ಹೊಟ್ಟೆಯ ಮೇಲೆ ಅಂಟಿಸಿಕೊಡರೆ, ಅದರಲ್ಲಿನ ಅಂಶ ನೇರವಾಗಿ ರಕ್ತಕ್ಕೆ ಪೂರೈಕೆಯಾಗುವ ಜೊತೆಗೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲವೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...