alex Certify
ಕನ್ನಡ ದುನಿಯಾ       Mobile App
       

Kannada Duniya

ಚಹಾ ಕಪ್ ಕೂಡ ಮಾಡುತ್ತೆ ರಿಮೋಟ್ ಕೆಲಸ

ಮನೆಯಲ್ಲಿ ಟಿವಿ ರಿಮೋಟ್ ಕಳೆದು ಹೋಗೋದು ಸಾಮಾನ್ಯ. ಎಲ್ಲೋ ಇಟ್ಟು ಮರೆತು ಬಿಟ್ಟಿರ್ತೇವೆ. ಪ್ರೋಗ್ರಾಮ್ ಶುರುವಾಗಿದೆ, ಅರ್ಜೆಂಟಾಗಿ ಟಿವಿ ಹಾಕೋಣ ಅಂದ್ಕೊಂಡಾಗ ರಿಮೋಟ್ ಸಿಗೋದೇ ಇಲ್ಲ. ಆದ್ರೆ ಈಗ ಅಂತಹ ಸಮಸ್ಯೆಯೇ ಇಲ್ಲ. ಯಾಕಂದ್ರೆ ಎಲ್ಲಾ ಸಾಧನಗಳೂ ರಿಮೋಟ್ ಆಗಿ ಕಾರ್ಯನಿರ್ವಹಿಸಬಲ್ಲವು.

ಚಹಾ ಕಪ್ ಗಳು, ಮಕ್ಕಳ ಆಟಿಕೆ ಕಾರುಗಳನ್ನು ಕೂಡ ನೀವು ರಿಮೋಟ್ ನಂತೆ ಬಳಸಬಹುದು. ಬ್ರಿಟನ್ ಯೂನಿವರ್ಸಿಟಿಯಲ್ಲಿ ಈ ಬಗ್ಗೆ ಸಂಶೋಧನೆ ನಡೆದಿದೆ. ಮ್ಯಾಚ್ ಪಾಯಿಂಟ್ ಅಂತಾ ಈ ಟೆಕ್ನಾಲಜಿಯ ಹೆಸರು. ಯಾವುದೇ ಸಾಧನಗಳಲ್ಲಾದ್ರೂ ನೀವು ಟಿವಿ ವಾಲ್ಯೂಮ್ ಹೆಚ್ಚು ಕಡಿಮೆ ಮಾಡಬಹುದು.

ಚಾನೆಲ್ ಬದಲಾಯಿಸಬಹುದು. ಮೆನು ಕೂಡ ನೋಡಬಹುದು. ಬಹಳ ದೂರದಿಂದ್ಲೂ ನೀವಿದನ್ನು ಬಳಸಬಹುದು. ನಿಮ್ಮ ಕೈಗಳನ್ನು ಗುರುತಿಸಬಹುದಾದ ಸಾಫ್ಟ್ ವೇರ್ ಅಳವಡಿಸಿರಲಾಗುತ್ತದೆ. ಯುಟ್ಯೂಬ್ ಟ್ಯುಟೋರಿಯಲ್ಸ್, ಬೈಕ್ ಮೆಂಡಿಂಗ್, ಕೇಕ್ ಬೇಕಿಂಗ್ ಅನ್ನೂ ಇದರಲ್ಲೇ ನಿಯಂತ್ರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...