alex Certify
ಕನ್ನಡ ದುನಿಯಾ       Mobile App
       

Kannada Duniya

ಕಛೇರಿಯಲ್ಲೇ ಗಡದ್ದಾಗಿ ನಿದ್ರೆಗೆ ಜಾರಿದ ಸಚಿವೆ

ತೆಹ್ರಿಕ್-ಇ-ಇನ್ಸಾಫ್ ಪಾಕಿಸ್ತಾನದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್, ‘ನಯಾ ಪಾಕಿಸ್ತಾನ’ ಕಟ್ಟಲು ಮುಂದಾಗಿದ್ದಾರೆ. ಜನರಲ್ಲಿ ಹೊಸ ಆಶಾ ಕಿರಣ ಮೂಡಿಸಿರುವ ಸರ್ಕಾರ, ಸದ್ಯ ಟ್ರೋಲ್ ಗೆ ಗುರಿಯಾಗಿದೆ. ಪಾಕ್ ಸಚಿವರೊಬ್ಬರ ವರ್ತನೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಾನವ ಹಕ್ಕುಗಳ ಸಚಿವೆ, ಶಿರೀನ್ ಮಜರಿ ತಮ್ಮ ಕಚೇರಿಯಲ್ಲಿ ಮಲಗಿರುವ ಫೋಟೋ ಸಕತ್ ವೈರಲ್ ಆಗಿದೆ. ಸಚಿವೆ ತನ್ನ ಕುರ್ಚಿಯಲ್ಲಿ ಕುಳಿತು ನಿದ್ದೆಗೆ ಜಾರಿರುವ ಫೋಟೋ ಭಾರೀ ಸದ್ದು ಮಾಡ್ತಾ ಇದೆ. ನೆಟ್ಟಿಗರು ನೂತನ ಸಚಿವೆಯ ಕಾರ್ಯವೈಖರಿ ವಿರುದ್ಧ ಕಿಡಿ ಕಾರಿದ್ದಾರೆ.

ಮಾನವ ಹಕ್ಕುಗಳ ಸಚಿವೆ ನಡೆಗೆ ತೀವ್ರ ಖಂಡನೆ ವ್ಯಕ್ತವಾಗ್ತಿದೆ. ಕೆಲವು ನೆಟ್ಟಿಗರು ಈ ಫೋಟೋಗೆ ಕಮೆಂಟ್ ಮಾಡಿ ಸಚಿವೆಯ ಕಾಲು ಎಳೆದಿದ್ದಾರೆ. ತನ್ನ ಕಚೇರಿಯಲ್ಲಿ ಕೆಲಸದ ವೇಳೆ ಹಾಯಾಗಿ ಮಲಗಿರುವ ಸಚಿವರ ವಿರುದ್ಧ ಅಂತರ್ಜಾಲ ಬಳಕೆದಾರರು ಫುಲ್ ಗರಂ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...