alex Certify
ಕನ್ನಡ ದುನಿಯಾ       Mobile App
       

Kannada Duniya

ಫೋಟೋ ಶೂಟ್ ಮರೆತು ‘ಮಾನವೀಯತೆ’ ಮೆರೆದ ವಧು

ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಗೆ ಭಾರೀ ಡಿಮ್ಯಾಂಡ್ ಇದೆ. ಫೋಟೋಶೂಟ್ ಗಾಗಿ ವಧು-ವರರು ನಗರದ ಹೊರವಲಯವನ್ನು ಹೆಚ್ಚಾಗಿ ಆರಿಸಿಕೊಳ್ತಾರೆ. ಆದ್ರೆ ಇತ್ತೀಚೆಗೆ ಚೀನಾದ ವಫಾಂಗ್ಡಿಯನ್ ನಗರದಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಡೆಸುತ್ತಿದ್ದ ಜೋಡಿಯೊಂದು ದಿಢೀರನೆ ವಿಶ್ವ ಪ್ರಸಿದ್ಧಿಯಾಗಿಬಿಟ್ಟಿದೆ.

ನರ್ಸ್ ಆಗಿ ಕೆಲಸ ಮಾಡುತ್ತಿರುವ ಕ್ಸೆ ಡೆನ್ ಎಂಬಾಕೆ ತನ್ನ ಭಾವಿ ಪತಿಯೊಂದಿಗೆ ಫೋಟೋಶೂಟ್ ನಡೆಸುತ್ತಿದ್ದಳು. ಈ ವೇಳೆ ಅಲ್ಲಿ ಕಾರು ಮತ್ತು ತ್ರಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದೆ. ತ್ರಿಚಕ್ರ ವಾಹನದಲ್ಲಿದ್ದ ಮಹಿಳೆಯೊಬ್ಬರು ಗಾಡಿಯಿಂದ ಕೆಳಗೆ ಬಿದ್ದುಬಿಡ್ತಾರೆ. ಈ ಸಂದರ್ಭದಲ್ಲಿ ನರ್ಸ್ ಕ್ಸೆ ಡೆನ್ ಹಿಂದು ಮುಂದು ಯೋಚನೆ ಮಾಡದೆ ಫೋಟೋ ಶೂಟ್ ಅರ್ಧಕ್ಕೆ ನಿಲ್ಲಿಸಿ ಆಕೆಯ ಸಹಾಯಕ್ಕೆ ನಿಂತುಬಿಡ್ತಾರೆ. ಆಕೆಯನ್ನ ಆರೈಕೆ ಮಾಡಿ ಆಸ್ಪತ್ರೆ ಸೇರೋದಕ್ಕೆ ಸಹಾಯ ಮಾಡಿದ್ದಾರೆ.

ಈ ಸಂಪೂರ್ಣ ಘಟನೆಯ ವಿಡಿಯೋ ಈಗ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಸೆ ಡೆನ್, ನರ್ಸ್ ಆಗಿ ನಾನು ನನ್ನ ಕೆಲಸ ಮಾಡಿದ್ದೀನಿ ಎಂದಿದ್ದಾರೆ. ಇದೇ ಶನಿವಾರ ಆಕೆ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದು, ಕ್ಸೆ ಡೆನ್ ಕಾರ್ಯವನ್ನು ಈಗ ಎಲ್ಲರೂ ಕೊಂಡಾಡುವುದರ ಜೊತೆಗೆ ಆಕೆಯ ವೈವಾಹಿಕ ಜೀವನಕ್ಕೆ ಶುಭಾಶಯ ಹೇಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...