alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಬಾಗಿಲು ತೆರೆದ ಐತಿಹಾಸಿಕ ಕೃಷ್ಣ ದೇವಸ್ಥಾನ

ನೇಪಾಳದ ಕಠ್ಮಂಡುನಲ್ಲಿರುವ ಐತಿಹಾಸಿಕ ಶ್ರೀಕೃಷ್ಣ ದೇವಸ್ಥಾನ ಮೂರು ವರ್ಷಗಳ ಬಳಿಕ ಮತ್ತೆ ಭಕ್ತರಿಗಾಗಿ ಬಾಗಿಲು ತೆರೆದಿದೆ. 2015ರ ಭೂಕಂಪದ ನಂತರದಲ್ಲಿ ದೇವಾಲಯ ಸಾಕಷ್ಟು ಹಾನಿಗೊಳಗಾಗಿತ್ತು. 7.8 ಕಂಪನಾಂಕದಲ್ಲಿ 2015ರಲ್ಲಿ ಸಂಭವಿಸಿದ ಭೂಕಂಪದಲ್ಲಿ 8700 ಮಂದಿ ಮೃತಪಟ್ಟಿದ್ದರು. ನೇಪಾಳದ ಅನೇಕ ಐತಿಹಾಸಿಕ ದೇಗುಲಗಳು, ಮನೆ, ಬೆಟ್ಟ, ಗುಡ್ಡಗಳು ಧರಾಶಾಹಿಯಾಗಿದ್ದವು.

17ನೇ ಶತಮಾನದಲ್ಲಿ ಸಿದ್ದಿ ನರಸಿಂಗ ಮಲ್ಲನಿಂದ ನಿರ್ಮಾಣವಾಗಿದ್ದ ಶ್ರೀಕೃಷ್ಣ ದೇವಾಲಯ ಭಾರತದ ಶಿಖರ ವಾಸ್ತುಶಿಲ್ಪದ ಆಕಾರದಲ್ಲಿ ನಿರ್ಮಾಣವಾಗಿದ್ದ ಕಾರಣ ತುಂಬಾನೇ ವಿಶೇಷ ಸ್ಥಾನ ಪಡೆದಿತ್ತು. ಯುನೆಸ್ಕೋದ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೂ ದೇವಾಲಯ ಸೇರ್ಪಡೆಯಾಗಿತ್ತು. 2015ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ದೇವಾಲಯ ಸಾಕಷ್ಟು ಹಾನಿಗೊಳಗಾಗಿತ್ತು.

ಆನಂತರದಲ್ಲಿ ಆರಂಭವಾದ ದೇವಾಲಯದ ಜೀರ್ಣೋದ್ಧಾರ ಕಾರ್ಯ ಇತ್ತೀಚೆಗಷ್ಟೆ ಮುಗಿದಿತ್ತು. ಕೃಷ್ಣ ಜನ್ಮಾಷ್ಟಮಿಗೆ ದೇವಾಲಯವನ್ನು ಪುನರಾರಂಭಿಸುವ ಯೋಜನೆಯೊಂದಿಗೆ ಬಣ್ಣಬಣ್ಣದ ಧ್ವಜಗಳು, ದೀಪಗಳು, ಹೂವುಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು. ಶುಭ ಕಾಲದಲ್ಲಿ ದೇವಾಲಯದಲ್ಲಿ ಶುದ್ಧಿ ಕಾರ್ಯವನ್ನು ಕೈಗೊಂಡು ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...