alex Certify
ಕನ್ನಡ ದುನಿಯಾ       Mobile App
       

Kannada Duniya

ನೇಪಾಳದ ಬಳಿಯಲ್ಲಿರುವ ನಿಷೇಧಿತ ನೋಟುಗಳ ಮೌಲ್ಯವೆಷ್ಟು ಗೊತ್ತಾ?

2016 ರ ನವೆಂಬರ್ 8 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ 1000 ಹಾಗೂ 500 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯರು ಮಾತ್ರವಲ್ಲ ನೆರೆ ರಾಷ್ಟ್ರಗಳಾದ ನೇಪಾಳ ಹಾಗೂ ಭೂತಾನ್ ಜನತೆ ಸಹ ಸಂಕಷ್ಟಕ್ಕೀಡಾಗಿದ್ದರು.

ಭಾರತೀಯರು ತಾವು ಹೊಂದಿದ್ದ 1000 ಹಾಗೂ 500 ರೂ. ನೋಟುಗಳ ಬದಲಾವಣೆಗೆ ಹಲವು ಅವಕಾಶಗಳನ್ನು ನೀಡಲಾಗಿದ್ದು, ಶೇ.99 ರಷ್ಟು ನೋಟುಗಳು ಬ್ಯಾಂಕಿಂಗ್ ವಲಯಕ್ಕೆ ವಾಪಾಸ್ ಬಂದಿವೆ ಎನ್ನಲಾಗಿದೆ. ಭಾರತೀಯ ನೋಟುಗಳು ನೇಪಾಳ ಹಾಗೂ ಭೂತಾನ್ ನಲ್ಲಿಯೂ ಚಲಾವಣೆಯಲ್ಲಿದ್ದ ಕಾರಣ ಅಲ್ಲಿನ ಜನತೆಗೆ ತಾವು ಹೊಂದಿದ್ದ ನಿಷೇಧಿತ ನೋಟುಗಳಾದ 1000 ಹಾಗೂ 500 ರೂ. ಬದಲಾವಣೆಗೆ ಯಾವುದೇ ಅವಕಾಶ ಸಿಕ್ಕಿರಲಿಲ್ಲ.

ನೇಪಾಳದಲ್ಲಿ ಸುಮಾರು 950 ಕೋಟಿ ರೂ. ಮೌಲ್ಯದ 1000 ಹಾಗೂ 500 ರೂ. ಮುಖಬೆಲೆಯ ಹಳೆ ನೋಟುಗಳಿವೆ ಎನ್ನಲಾಗಿದ್ದು, ಇವುಗಳ ಬದಲಾವಣೆಗೆ ಅವಕಾಶ ಮಾಡಿಕೊಡುವಂತೆ ಭಾರತ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಆದರೆ ಸರ್ಕಾರ ಈ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲವೆನ್ನಲಾಗಿದ್ದು, ಒಂದು ವೇಳೆ ಈ ನೋಟುಗಳ ಬದಲಾವಣೆಗೆ ಅವಕಾಶ ನೀಡಿದರೆ ನಿಷೇಧಕ್ಕೊಳಗಾದ ನೋಟುಗಳು ಶೇ.100 ರಷ್ಟು ಬ್ಯಾಂಕಿಂಗ್ ವಲಯಕ್ಕೆ ವಾಪಾಸ್ ಬಂದಂತಾಗುತ್ತದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...