alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಮತಿ ಇಲ್ಲದೆ ಎವರೆಸ್ಟ್ ಏರಿದವನಿಗೇನಾಯ್ತು..?

everest

ಅನುಮತಿ ಪಡೆಯದೇ ಏಕಾಂಗಿಯಾಗಿ ಎವರೆಸ್ಟ್ ಶಿಖರ ಏರುತ್ತಿದ್ದ ದಕ್ಷಿಣ ಆಫ್ರಿಕಾದ ವ್ಯಕ್ತಿಯೊಬ್ಬನಿಗೆ ನೇಪಾಳದಲ್ಲಿ ಭರ್ತಿ ದಂಡ ವಿಧಿಸಲಾಗಿದೆ. ಆತನನ್ನು ಎವರೆಸ್ಟ್ ನಿಂದ ಕೆಳಕ್ಕಿಳಿಸಿದ್ದಲ್ಲದೆ ನೇಪಾಳ ಸರ್ಕಾರ 22,000 ಡಾಲರ್ ದಂಡ ಹಾಕಿದೆ. 43 ವರ್ಷದ ರ್ಯಾನ್ ಸೀನ್ ಡೇವಿ ಎಂಬಾತ ಒಂಟಿಯಾಗಿಯೇ ಎವರೆಸ್ಟ್ ಶಿಖರ ಏರುತ್ತಿದ್ದ. ಸುಮಾರು 6,400 ಮೀಟರ್ ಗೂ  (21,000 ಅಡಿ) ಅಧಿಕ ಎತ್ತರಕ್ಕೆ ಹೋಗಿದ್ದ.

ನಂತರ ಆತನನ್ನು ಹಿಡಿದ ಅಧಿಕಾರಿಗಳು ಎವರೆಸ್ಟ್ ನಿಂದ ಕೆಳಕ್ಕಿಳಿಸಿದ್ದಾರೆ. ಸುಮಾರು 14 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ನಿಯಮದ ಪ್ರಕಾರ ಎವರೆಸ್ಟ್ ಶಿಖರದ ಮೇಲಕ್ಕೆ ಹತ್ತಲು ವಿದೇಶೀಯರು, ನೇಪಾಳ ಸರ್ಕಾರಕ್ಕೆ 11,000 ಡಾಲರ್ ಹಣ ಕಟ್ಟಬೇಕು. ಜೊತೆಗೆ ಒಂಟಿಯಾಗಿ ಎವರೆಸ್ಟ್ ಏರಲು ಕೂಡ ಅನುಮತಿ ಇಲ್ಲ.

ಆದ್ರೆ ಅಧಿಕಾರಿ ಒಂಟಿಯಾಗಿದ್ದರಿಂದ ಆತನ ಕಣ್ಣುತಪ್ಪಿಸಿ ಸೀನ್ ಡೇವಿ ಓಡಿ ಬಂದಿದ್ದ. ಆತನಿಗೆ ನೇಪಾಳ ಪ್ರವೇಶಿಸದಂತೆ 5 ವರ್ಷ ನಿಷೇಧ ವಿಧಿಸುವ ಸಾಧ್ಯತೆ ಇದೆ. ಕೇವಲ 6 ಗಂಟೆಗಳಲ್ಲಿ 7010 ಮೀಟರ್ ಏರಿದ್ದ ಸೀನ್ ಡೇವಿ, ಶುಲ್ಕ ಕಟ್ಟದ ತಪ್ಪಿಗೆ ಸಾಧನೆಯೊಂದರಿಂದ ವಂಚಿತನಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...