alex Certify
ಕನ್ನಡ ದುನಿಯಾ       Mobile App
       

Kannada Duniya

ಮುಟ್ಟಿನ ಕುರಿತಾಗಿ ಹೊಸ ಕಾನೂನು….

nepal

ಕಾಠ್ಮಂಡು: ಮುಟ್ಟಾದ ಮಹಿಳೆಯರು ಅಪವಿತ್ರರಲ್ಲ. ಅವರನ್ನು ಮನೆಯಿಂದ ಹೊರಗಿಡುವುದು ಅಪರಾಧವಾಗುತ್ತದೆ. ಈ ನಿಟ್ಟಿನಲ್ಲಿ ನೇಪಾಳದಲ್ಲಿ ಹೊಸ ಕಾನೂನು ಜಾರಿಗೆ ತರಲು ಚಿಂತಿಸಲಾಗಿದೆ.

ನೇಪಾಳದಲ್ಲಿ ಚಹೌಪದಿ ಎಂಬ ಪದ್ಧತಿ ಇದ್ದು, ಹೆಚ್ಚಿನ ಸಮುದಾಯದವರು ಮುಟ್ಟಾದ ಮಹಿಳೆಯರನ್ನು ಅಪವಿತ್ರ ಎಂದು ಪರಿಗಣಿಸುತ್ತಾರೆ.

ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ 3 ದಿನ ಮನೆಯಿಂದ ಹೊರಗೆ ಮಹಿಳೆಯರು ಉಳಿಯುವ ಪರಿಸ್ಥಿತಿ ಇದೆ. ಈ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸುವ ಉದ್ದೇಶದಿಂದ ನೇಪಾಳ ಸರ್ಕಾರ ಹೊಸ ಕಾನೂನು ಜಾರಿಗೆ ತೀರ್ಮಾನಿಸಿದೆ. ಮಹಿಳೆಯರನ್ನು ಮುಟ್ಟಿನ ಸಮಯದಲ್ಲಿ ದೂರ ಇಡುವವರಿಗೆ 3 ತಿಂಗಳು ಜೈಲು ಶಿಕ್ಷೆ, 3000 ರೂ. ದಂಡ ಹಾಕಲಾಗುತ್ತದೆ.

ಮುಟ್ಟಿನ ನಂತರ ಅಥವಾ ಪ್ರಸವದ ನಂತರ ಮಹಿಳೆಯರನ್ನು ಚಹೌಪದಿಯಲ್ಲಿ ಇಡಬಾರದು. ಯಾವುದೇ ರೀತಿಯ ತಾರತಮ್ಯ ಮಾಡಬಾರದು. ಅವರಿಗೆ ಅಸ್ಪೃಶ್ಯ ಮತ್ತು ಅಮಾನವೀಯ ನಡವಳಿಕೆಯನ್ನು ತೋರಬಾರದು ಎಂದು ನೇಪಾಳ ಸಂಸತ್ ನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ಕಾನೂನಿನಲ್ಲಿ ಹೇಳಲಾಗಿದೆ.

ಕಳೆದ ತಿಂಗಳು ಮುಟ್ಟಿನ ಸಮಯದಲ್ಲಿ ಮನೆಯಿಂದ ಹೊರಗೆ ಉಳಿದಿದ್ದ ಹರೆಯದ ಹುಡುಗಿ ಹಾವು ಕಚ್ಚಿ ಸಾವನ್ನಪ್ಪಿದ್ದಳು. ಇದಾದ ಬಳಿಕ ಹೆಚ್ಚಿನ ಅರಿವು ಮತ್ತು ಕಾನೂನು ಜಾರಿಗೆ ಒತ್ತಾಯ ಕೇಳಿ ಬಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...