alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಮೊತ್ತಕ್ಕೆ ಬಿಕರಿಯಾಗಿದೆ ಆರ್ಮ್ ಸ್ಟ್ರಾಂಗ್ ಬ್ಯಾಗ್

neil

ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟಿದ್ದ ನೀಲ್ ಆರ್ಮ್ ಸ್ಟ್ರಾಂಗ್ ಅಲ್ಲಿನ ಮಾದರಿಗಳನ್ನು ಸಂಗ್ರಹಿಸಿಕೊಂಡು ಬಂದಿದ್ದ ಬ್ಯಾಗನ್ನು ಹರಾಜು ಹಾಕಲಾಗಿದೆ. ಈ ಬ್ಯಾಗ್ ಬರೋಬ್ಬರಿ 1.8 ಮಿಲಿಯನ್ ಡಾಲರ್ ಅಂದ್ರೆ 11.58 ಕೋಟಿ ರೂಪಾಯಿಗೆ ಬಿಕರಿಯಾಗಿದೆ.

1969ರಲ್ಲಿ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಹೆಜ್ಜೆ ಇಟ್ಟಿದ್ದರು. ಅದಾಗಿ 48 ವರ್ಷಗಳೇ ಕಳೆದಿವೆ. ಆದ್ರೆ ಅವರು ಬಳಸಿದ್ದ ಬ್ಯಾಗ್ ಮಾತ್ರ ಹಾಗೇ ಇದೆ. ಚಂದ್ರನ ಅಂಗಳದಲ್ಲಿದ್ದ ಧೂಳು, ಬ್ಯಾಗ್ ಮೇಲಾದ ಕಲೆಗಳು ಎಲ್ಲವೂ ಹಾಗೇ ಉಳಿದಿವೆ.

ಕೇವಲ 5 ನಿಮಿಷಗಳ ಕಾಲ ಹರಾಜು ಪ್ರಕ್ರಿಯೆ ನಡೀತು. ಫೋನ್ ಮೂಲಕ ನಡೆದ ಈ ಬಿಡ್ಡಿಂಗ್ ನಲ್ಲಿ ವ್ಯಕ್ತಿಯೊಬ್ಬ ಭಾರೀ ಮೊತ್ತ ಕೊಟ್ಟು ಬ್ಯಾಗ್ ಕೊಂಡುಕೊಂಡಿದ್ದಾನೆ. 2015ರಲ್ಲಿ ಈ ಮೂನ್ ಬ್ಯಾಗನ್ನು ವಕೀಲನೊಬ್ಬ 995 ಡಾಲರ್ ಕೊಟ್ಟು ಖರೀದಿ ಮಾಡಿದ್ದ.

2.4 ಮಿಲಿಯನ್ ಡಾಲರ್ ಗೆ ಬ್ಯಾಗ್ ಹರಾಜಾಗಬಹುದು ಅನ್ನೋ ನಿರೀಕ್ಷೆ ಇತ್ತು. ಆದ್ರೆ ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ಅದು ಮಾರಾಟವಾಗಿದೆ. ಬ್ಯಾಗನ್ನು ಹಿಂದೊಮ್ಮೆ ನಾಸಾಗೆ ಕಳಿಸಿ ಪರೀಕ್ಷಿಸಲಾಗಿತ್ತು. ಬ್ಯಾಗ್ ಮೇಲಿರುವ ಧೂಳು ಚಂದ್ರನ ಅಂಗಳದಲ್ಲಿದ್ದದ್ದು ಅನ್ನೋದನ್ನು ನಾಸಾ ದೃಢಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...