alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾರಾಜ ರಂಜಿತ್ ಸಿಂಗ್‌ ಪತ್ನಿಯ ನೆಕ್ಲೆಸ್ ಎಷ್ಟಕ್ಕೆ ಹರಾಜಾಯ್ತು ಗೊತ್ತಾ?

ಸಿಖ್ ದೊರೆ ಮಹಾರಾಜ ರಂಜಿತ್ ಸಿಂಗ್ ಅವರ ಪತ್ನಿ ಮಹಾರಾಣಿ ಜಿಂದನ್ ಕೌರ್ ಅವರ ಪಚ್ಚೆ ಮತ್ತು ಮುತ್ತಿನ ಮಣಿಗಳ ನೆಕ್ಲೆಸ್ ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ 1,87,000 ಪೌಂಡ್‌ಗಳಿಗೆ (1.76 ಕೋಟಿ ರೂ.) ಮಾರಾಟವಾಗಿದೆ.

ಮಹಾರಾಜನ ಮರಣದ ವೇಳೆ ಸತಿ ಸಹಗಮನ ನಡೆಸದೆ ಉಳಿದ ಕೊನೆಯ ಹಾಗೂ ಏಕೈಕ ಪತ್ನಿಯಾಗಿರುವ ಕೌರ್ ಅವರು ಧರಿಸಿದ್ದ ಈ ನೆಕ್ಲೆಸ್‌ನ ಬೆಲೆ 80,000 ದಿಂದ 1,20,000 ಪೌಂಡ್‌ಗಳಿರಬಹುದೆಂಬ ಲೆಕ್ಕಾಚಾರವನ್ನು ಮೀರಿ ಹರಾಜಾಗಿದೆ.

ಮಂಗಳವಾರ ಲಂಡನ್‌ನಲ್ಲಿ ಲಾಹೋರ್ ಟ್ರೆಶರಿಯಿಂದ ನಡೆದ ಬೊನ್ಹಾಮ್ಸ್ ಇಸ್ಲಾಮಿಕ್ ಆಂಡ್ ಇಂಡಿಯನ್ ಆರ್ಟ್ ಸೇಲ್‌ನ ಭಾಗವಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾದ ಪ್ರಮುಖ ಕಲಾ ಕುಸುರಿ ಇದಾಗಿದೆ.

ಪೂರ್ತಿ ಹರಾಜು ಪ್ರಕ್ರಿಯೆಯಲ್ಲಿ 18,18,500 ಪೌಂಡ್‌ಗಳಷ್ಟು (17.17 ಕೋಟಿ ರೂ.) ಮೌಲ್ಯದ ವಿವಿಧ ಪುರಾತನ ವಸ್ತುಗಳು ಮಾರಾಟಗೊಂಡಿವೆ ಎಂದು ಹರಾಜು ಸಂಸ್ಥೆ ಹೇಳಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...