alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಣ ಸಾಲವನ್ನ ವಿದ್ಯಾರ್ಥಿಗಳು ಹೇಗೆ ಉಡಾಯಿಸ್ತಿದ್ದಾರೆ ಗೊತ್ತಾ?

students

ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲಿ ಅನ್ನೋ ದೃಷ್ಟಿಯಿಂದ ಬ್ಯಾಂಕ್ ಗಳು ಸಾಲ ಕೊಡುತ್ತವೆ. ಆದ್ರೆ ಆ ಹಣವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ತಿದ್ದಾರಾ ಅನ್ನೋದು ಎಲ್ಲರ ಪ್ರಶ್ನೆ.

ಹೊಸ ಸಂಶೋಧನೆಯೊಂದರ ಪ್ರಕಾರ ವಿದ್ಯಾರ್ಥಿಗಳು ಪಡೆಯೋ ಶಿಕ್ಷಣ ಸಾಲ ಮೋಜಿಗಾಗಿ ಖರ್ಚಾಗ್ತಾ ಇದೆ. ಮದ್ಯಪಾನ, ಪಾರ್ಟಿ, ಶಾಪಿಂಗ್, ಜಿಮ್, ಕಾಸ್ಮೆಟಿಕ್ ಸರ್ಜರಿ, ಕ್ಲಬ್, ಪಬ್ ಹೀಗೆ ಸಾಲದ ಹಣವನ್ನು ವಿದ್ಯಾರ್ಥಿಗಳು ಎಂಜಾಯ್ಮೆಂಟ್ ಗಾಗಿ ಉಡಾಯಿಸ್ತಿದ್ದಾರೆ.

ಬ್ರಿಟನ್ ಯೂನಿವರ್ಸಿಟಿಯಲ್ಲಿ ಓದ್ತಾ ಇರೋ 1500 ವಿದ್ಯಾರ್ಥಿಗಳನ್ನು ಸಂದರ್ಶಿಸಿದಾಗ ಈ ಆಘಾತಕಾರಿ ಅಂಶ ಬಯಲಾಗಿದೆ. ಅಗತ್ಯವಿಲ್ಲದ ವಸ್ತುಗಳ ಖರೀದಿ, ವಿದೇಶ ಪ್ರವಾಸ ಹೀಗೆ ಮನಸ್ಸಿಗೆ ಬಂದಿದ್ದನ್ನೆಲ್ಲ ವಿದ್ಯಾರ್ಥಿಗಳು ಸಾಲದ ಹಣದಲ್ಲೇ ಮಾಡ್ತಿರೋದು ದುರಂತ.

ಶೇ.30 ರಷ್ಟು ವಿದ್ಯಾರ್ಥಿಗಳು ಶಿಕ್ಷಣ ಸಾಲದ ಹಣವನ್ನು ಅನವಶ್ಯಕ ಖರ್ಚು ಮಾಡ್ತಿದ್ದಾರೆ, ಶೇ.26 ರಷ್ಟು ವಿದ್ಯಾರ್ಥಿಗಳು ನೈಟ್ ಕ್ಲಬ್, ಮತ್ತು ಮದ್ಯಪಾನಕ್ಕಾಗಿ ಆ ಹಣವನ್ನು ಸುರಿಯುತ್ತಿದ್ದಾರೆ. ಶೇ.16 ರಷ್ಟು ವಿದ್ಯಾರ್ಥಿಗಳು ಶಿಕ್ಷಣ ಸಾಲದ ರೂಪದಲ್ಲಿ ಪಡೆದ ಅಷ್ಟೂ ಹಣವನ್ನು ಕೇವಲ ಒಂದು ತಿಂಗಳಲ್ಲಿ ಉಡಾಯಿಸ್ತಿದ್ದಾರೆ. ಹಣವನ್ನು ಪ್ರಯೋಜನಕಾರಿಯಾಗಿ ಹೇಗೆ ಬಳಸಿಕೊಳ್ಳಬೇಕು ಅನ್ನೋ ಬಗ್ಗೆ ಪೋಷಕರು ಅಥವಾ ಪ್ರಾಧ್ಯಾಪಕರಿಂದ ಸಲಹೆ ದೊರೆತಿಲ್ಲ ಅಂತಾ ಶೇ.29 ರಷ್ಟು ವಿದ್ಯಾರ್ಥಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...