alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿಗೆ ಪತ್ರಕರ್ತೆ ಕೇಳಿದ್ದಾಳೆ ಇಂತ ಪ್ರಶ್ನೆ

megyn_kelly_modi_759ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ ಸ್ಟಾಗ್ರಾಂನಲ್ಲಿ 6.8 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಮೋದಿ ವಿಶ್ವದಲ್ಲಿ ಮೊದಲ ಸಾಲಿನಲ್ಲಿದ್ದಾರೆ.

ಫೇಸ್ ಬುಕ್ ನಲ್ಲೂ ಮೋದಿಯವರಿಗೆ 4 ಕೋಟಿ ಮಂದಿ ಫಾಲೋವರ್ ಗಳಿದ್ದಾರೆ. ಇನ್ನು ಟ್ವಿಟ್ಟರ್ ನಲ್ಲಿ ಮೋದಿಯವರು 30 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದು, ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಂತರದ ಸ್ಥಾನದಲ್ಲಿದ್ದಾರೆ.

ನರೇಂದ್ರ ಮೋದಿಯವರು ಪ್ರತಿನಿತ್ಯ ಟ್ವಿಟ್ಟರ್ ನಲ್ಲಿ ಅಪ್ ಡೇಟ್ ನೀಡುತ್ತಿರುತ್ತಾರೆ. ಸದ್ಯ ಮೋದಿಯವರು ವಿದೇಶ ಪ್ರವಾಸದಲ್ಲಿದ್ದು, ರಷ್ಯಾದಲ್ಲಿದ್ದ ವೇಳೆ ಖ್ಯಾತ ಪತ್ರಕರ್ತೆ Megyn Kelly ಮೋದಿಯವರಿಗೆ ಕೇಳಿದ ಪ್ರಶ್ನೆಗೆ ಜಾಲತಾಣಿಗರಿಂದ ಗೇಲಿ ವ್ಯಕ್ತವಾಗುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರ ಸಂದರ್ಶನಕ್ಕೆ ಬಂದಿದ್ದ Megyn Kelly ಸೇಂಟ್ ಪೀಟರ್ಸ್ಬರ್ಗ್ ನಲ್ಲಿನ Konstantin ಪ್ಯಾಲೇಸ್ ನಲ್ಲಿ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ ನರೇಂದ್ರ ಮೋದಿಯವರು ನಿಮ್ಮ ಟ್ವೀಟ್ ಗಳನ್ನು ಗಮನಿಸಿರುವುದಾಗಿ ಹೇಳಿದಾಗ ನೀವು ಟ್ವೀಟರ್ ನಲ್ಲಿದ್ದೀರಾ ಎಂದು Megyn Kelly ಪ್ರಶ್ನಿಸಿದ್ದಾರೆ. ಟ್ವೀಟರ್ ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಮೋದಿಯವರಿಗೆ ಒಬ್ಬ ಖ್ಯಾತ ಪತ್ರಕರ್ತೆ ಇಂತ ಪ್ರಶ್ನೆ ಕೇಳಿರುವುದಕ್ಕೆ ಈಗ ಗೇಲಿ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...