alex Certify
ಕನ್ನಡ ದುನಿಯಾ       Mobile App
       

Kannada Duniya

ನವಾಜ್ ಷರೀಫ್ ಅಪರಾಧಿ ಎಂದ ನ್ಯಾಯಾಲಯ

Pakistani Prime Minister Nawaz Sharif attends the closing session of 18th South Asian Association for Regional Cooperation (SAARC) summit in Kathmandu November 27, 2014. A brief meeting between India's Prime Minister Narendra Modi and his Pakistani counterpart appears to have salvaged a summit of South Asian leaders, with all eight countries clinching a last-minute deal to create a regional electricity grid. REUTERS/Niranjan Shrestha/Pool (NEPAL - Tags: POLITICS) - RTR4FUCN

ಅಕ್ರಮ ಸಂಪತ್ತು ಗಳಿಕೆ ಹಾಗೂ ಭ್ರಷ್ಟಾಚಾರ  ಪ್ರಕರಣದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ವಿರುದ್ಧದ ಆರೋಪ ಸಾಬೀತಾಗಿದೆ. ನವಾಜ್ ಷರೀಫ್ ಅಪರಾಧಿ ಅಂತಾ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅಷ್ಟೇ ಅಲ್ಲ ನವಾಜ್ ಷರೀಫ್ ರನ್ನು ಪ್ರಧಾನಿ ಹುದ್ದೆಯಿಂದ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದೆ.

ತಕ್ಷಣವೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದೆ. ನವಾಜ್ ಷರೀಫ್ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡುವಂತೆ ಪಾಕ್ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದಿಂದಾಗಿ ಪಾಕಿಸ್ತಾನ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ.

ನವಾಜ್ ಷರೀಫ್ ಲಂಡನ್ ನಲ್ಲಿ ಅಕ್ರಮ ಫ್ಲಾಟ್ ಹೊಂದಿದ್ದಾರೆಂಬ ಆರೋಪವಿದೆ. ಷರೀಫ್ ಅವರ ಕುಟುಂಬ ಸದಸ್ಯರ ಹೆಸರು ಕೂಡ ಈ ಅಕ್ರಮದಲ್ಲಿ ಕೇಳಿ ಬಂದಿದೆ. ಪನಾಮಾ ಪೇಪರ್ಸ್ ಮೂಲಕ ಈ ಪ್ರಕರಣ ಬಯಲಾಗಿತ್ತು. ನವಾಜ್ ಷರೀಫ್ ವಿರುದ್ಧದ ಆರೋಪಗಳ ಕುರಿತ ದಾಖಲೆಗಳನ್ನು ಕೂಡ ಪನಾಮಾ ವರದಿ ಬಹಿರಂಗಪಡಿಸಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...