alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ನ್ಯೂಸ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅರೆಸ್ಟ್

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಹಾಗೂ ಅವರ ಪುತ್ರಿ ಮರಿಯಮ್ ಶರೀಫ್ ಅವರನ್ನು ಪಾಕ್ ಅಧಿಕಾರಿಗಳು ಬಂಧಿಸಿದ್ದಾರೆ.

ನ್ಯಾಯಾಲಯದ ತೀರ್ಪು ಹೊರಬಿದ್ದ ವೇಳೆ ನವಾಜ್ ಷರೀಫ್ ಹಾಗೂ ಅವರ ಪುತ್ರಿ ಮರಿಯಮ್ ಶರೀಫ್ ಲಂಡನ್ ನಲ್ಲಿದ್ದು, ಕಳೆದ ರಾತ್ರಿ ಲಂಡನ್ ನಿಂದ ಹೊರಟು ಅಬುದಾಬಿಗೆ ಬಂದಿಳಿದಿದ್ದು, ಬಳಿಕ ಅವರು ಪಾಕಿಸ್ತಾನಕ್ಕೆ ಬಂದಿಳಿದಿದ್ದರು.

ನವಾಜ್ ಶರೀಫ್ ಹಾಗೂ ಮರಿಯಮ್ ಶರೀಫ್ ಇದ್ದ ವಿಮಾನ ನೇರವಾಗಿ ಲಾಹೋರ್ ಗೆ ತೆರಳಬೇಕಾಗಿತ್ತಾದರೂ ಅಲ್ಲಿ ಬಂಧನಕ್ಕೊಳಪಡಿಸಿದರೆ ನವಾಜ್ ಶರೀಫ್ ಬೆಂಬಲಿಗರು ಗಲಭೆ ನಡೆಸಬಹುದೆಂಬ ಕಾರಣಕ್ಕೆ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ವಿಳಂಬ ಮಾಡಲಾಗಿತ್ತೆನ್ನಲಾಗಿದೆ.

ಪಾಕಿಸ್ತಾನದಲ್ಲಿ ಇನ್ನು ಕೆಲ ದಿನಗಳಲ್ಲೇ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಬಂಧನಕ್ಕೊಳಗಾದರೆ ಅನುಕಂಪದ ಅಲೆಯಲ್ಲಿ ತಮ್ಮ ಪಕ್ಷ ಅಧಿಕಾರ ಪಡೆಯಬಹುದೆಂಬ ಲೆಕ್ಕಾಚಾರ ಹೊಂದಿರುವ ನವಾಜ್ ಶರೀಫ್, ಖುದ್ದು ತಾವಾಗಿ ಪಾಕಿಸ್ತಾನಕ್ಕೆ ತೆರಳಿ ಬಂಧನಕ್ಕೊಳಗಾಗಿದ್ದಾರೆಂದು ಹೇಳಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...