alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾದಲ್ಲಿ ಗಾರ್ಬಾ ನೃತ್ಯ ವೈಭವ

ನವರಾತ್ರಿಗೆ ತಯಾರಿ ಜೋರಾಗಿ ಸಾಗಿದೆ. ರಾಜ್ಯ, ದೇಶದಲ್ಲೊಂದೇ ಅಲ್ಲ ವಿದೇಶದಲ್ಲೂ ನವರಾತ್ರಿಯನ್ನು ಆಚರಿಸಲಾಗ್ತಿದೆ. ನವರಾತ್ರಿಯಲ್ಲಿ ಗುಜರಾತಿನ ಜನರು ಗರ್ಬಾ ನೃತ್ಯವನ್ನು ಮಾಡ್ತಾರೆ. ದೇಶದಲ್ಲಿರಲಿ ಇಲ್ಲ ವಿದೇಶದಲ್ಲಿರಲಿ. ಗುಜರಾತಿಗಳು ತಮ್ಮ ಸಂಪ್ರದಾಯವನ್ನು ಬಿಡೋದಿಲ್ಲ. ಎಂದಿನಂತೆ ಈ ವರ್ಷವೂ ಆಸ್ಟ್ರೇಲಿಯಾದಲ್ಲಿರುವ ಗುಜರಾತಿ ಕುಟುಂಬಗಳು ಗಾರ್ಬಾ ನೃತ್ಯ ಮಾಡಿದ್ವು.

3200ಕ್ಕೂ ಹೆಚ್ಚು ಮಂದಿ ಗಾರ್ಬಾ ನೃತ್ಯಕ್ಕೆ ಮೆರಗು ನೀಡಿದ್ದರು. ಮಕ್ಕಳು, ಹಿರಿಯರು ಎಲ್ಲರೂ ಹಾಡಿಗೆ ಹೆಜ್ಜೆ ಹಾಕಿದ್ರು. ಮೆಲ್ಬೋರ್ನ್ ನಲ್ಲಿರುವ ಸ್ನೇಹಿತರ ಗುಂಪು ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಗುಜರಾತಿ ಜನರ ಜೊತೆ ಭಾರತೀಯರೂ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.

ಈ ವರ್ಷ ನವರಾತ್ರಿಗೂ ಮೊದಲೇ ಗಾರ್ಬಾ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇತ್ತ ಗುಜರಾತಿನಲ್ಲಿ ಕೂಡ ಗಾರ್ಬಾ ನೃತ್ಯ ಕಾರ್ಯಕ್ರಮಕ್ಕೆ ತಯಾರಿಗಳು ನಡೆಯುತ್ತಿವೆ. ನೃತ್ಯ ಕಲಾವಿದರಿಗೆ ತರಬೇತಿ ನೀಡಲಾಗುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...