alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗಳನ ಅಂಗಳದಲ್ಲಿ ‘ಸೆಲ್ಫಿ’ ಕ್ಲಿಕ್ಕಿಸಿದ ಕ್ಯೂರಿಯಾಸಿಟಿ ರೋವರ್

56ac8e381f00005000216fd8

ಇತ್ತೀಚೆಗೆ ‘ಸೆಲ್ಫಿ’ ಹುಚ್ಚು ಹೆಚ್ಚುತ್ತಿರುವುದು ಎಲ್ಲರಿಗೂ ಗೊತ್ತು. ಯುವ ಜನತೆಯಂತೂ ಸೆಲ್ಫಿಗಾಗಿ ಮಾಡದ ದುಸ್ಸಾಹಸಗಳು ಕಡಿಮೆಯೇನಿಲ್ಲ. ಆದರೆ ಮಂಗಳನ ಅಂಗಳಕ್ಕೆ ಅಧ್ಯಯನಕ್ಕೆ ತೆರಳಿರುವ ಕ್ಯೂರಿಯಾಸಿಟಿ ರೋವರ್ ನೌಕೆ ತನ್ನದೊಂದು ಸೆಲ್ಫಿ ಕ್ಲಿಕ್ಕಿಸಿ ಭೂಮಿಗೆ ಕಳುಹಿಸಿದೆ.

ಹೌದು. ನಾಸಾ ಸಂಸ್ಥೆ ಕಳಿಸಿರುವ ಕ್ಯೂರಿಯಾಸಿಟಿ ರೋವರ್ ನೌಕೆ, ಮಂಗಳ ಗ್ರಹದಿಂದ ತನ್ನ ಲ್ಯಾಬೋರೇಟರಿಯ ಸೆಲ್ಫಿಯನ್ನು ಕ್ಲಿಕ್ಕಿಸಿ ಭೂಮಿಗೆ ರವಾನಿಸಿದ್ದು, ಈ ಸೆಲ್ಫಿಯನ್ನು ರೋವರ್ ನ ತುದಿಯಲ್ಲಿರುವ ಮಾರ್ಸ್ ಹ್ಯಾಂಡ್ ಲೆನ್ಸ್ ಇಮೇಜರ್ ಕ್ಯಾಮೆರಾದಿಂದ ತೆಗೆಯಲಾಗಿದೆ. ಈ ಮೂಲಕ ಮಂಗಳನ ಅಂಗಳದಲ್ಲಿನ ಹಲವು ರಹಸ್ಯಗಳನ್ನು ಪತ್ತೆ ಹಚ್ಚಲೂ ಸಹ ಅನುಕೂಲವಾಗಲಿದೆ ಎಂದು ‘ನಾಸಾ’ ತಿಳಿಸಿದೆ.

ವಿಶೇಷವೆಂದರೆ 2014ರಲ್ಲಿ ರೋವರ್, ಮಂಗಳ ಗ್ರಹದ ಮೇಲಿನ ಒಂದು ವರ್ಷ (678 ದಿನಗಳು) ಪೂರೈಸಿದ ಸಂದರ್ಭದಲ್ಲಿಯೂ ತನ್ನ ಸೆಲ್ಫಿಯನ್ನು ಕ್ಲಿಕ್ಕಿಸಿ ಭೂಮಿಗೆ ರವಾನಿಸಿತ್ತು. ಇದೀಗ ಮತ್ತೊಂದು ಸೆಲ್ಫಿಯನ್ನು ಕಳುಹಿಸಿಕೊಟ್ಟಿದ್ದು, ಒಟ್ಟಾರೆ ಈ ಸೆಲ್ಫಿ ಹುಚ್ಚು ಮಾನವನಿಗೆ ಮಾತ್ರವಲ್ಲ ಎಂಬುದು ಸಾಬೀತಾದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...