alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ 25 ವರ್ಷದೊಳಗೆ ಮಂಗಳನ ಅಂಗಳದಲ್ಲಿ ಮಾನವ…!

ಬಾಹ್ಯಾಕಾಶ ಕ್ಷೇತ್ರದಲ್ಲಿ‌ ಕಳೆದ ಹಲವು ವರ್ಷಗಳಿಂದ ಮಂಗಳ‌ ಗ್ರಹಕ್ಕೆ ಮಾನವನನ್ನು ಕಳುಹಿಸುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಆದರೀಗ‌ ಸದ್ಯದ ಮಟ್ಟಿಗೆ ಇದು ಕಷ್ಠಸಾಧ್ಯ ಎಂದು ನಾಸಾ ಹೇಳಿದ್ದು, ಮುಂದಿನ 25 ವರ್ಷದಲ್ಲಿ ‌ಇದನ್ನು ಸಾಧ್ಯವಾಗಿಸಲಾಗುವುದು ಎಂದಿದೆ.

ಮಂಗಳನಲ್ಲಿಗೆ ಮಾನವನನ್ನು‌ ಕಳುಹಿಸುವ ಬಗ್ಗೆ ಮಾತನಾಡಿರುವ ನಾಸಾ ವಿಜ್ಞಾನಿಗಳು, ಆ ಗ್ರಹಕ್ಕೆ‌ ಮಾನವನನ್ನು ರವಾನಿಸಲು ಹಲವು ತಾಂತ್ರಿಕ ಹಾಗೂ ವೈದ್ಯಕೀಯ ತೊಡಕುಗಳಿವೆ. ಪ್ರಮುಖವಾಗಿ ಮಂಗಳನಲ್ಲಿಗೆ ಹೋಗುವಾಗ ಎದುರಾಗುವ ಕಾಸ್ಮಾಸ್ ರೇಸ್ ಹಾಗೂ ಬೆಳಕಿನ ಸಾಂದ್ರತೆಯ ಬದಲಾವಣೆಯಿಂದಾಗುವ ಸಮಸ್ಯೆ ಎದುರಿಸಲು ಕೆಲ ತಂತ್ರಜ್ಞಾನದ ಅವಶ್ಯಕತೆಯಿದೆ. ಆದ್ದರಿಂದ ಮುಂದಿನ 25 ವರ್ಷದೊಳಗೆ ಈ ಎಲ್ಲ ಸಿದ್ಧತೆ ನಡೆಸಿ, ಮಾನವನನ್ನು ಮಂಗಳನಲ್ಲಿಗೆ ಕಳುಹಿಸಲಾಗುವುದು ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿವೃತ್ತ ಗಗನಯಾತ್ರಿ ಟಾಂ ಜೋನ್ಸ್, ಭೂಮಿ ಮಂಗಳನಿಗೆ ಸುಮಾರು 225 ಮಿಲಿಯನ್ ಕಿ.ಮೀ. ದೂರವಿದೆ. ಈ ದೂರವನ್ನು ಸದ್ಯದ ಸ್ಪೇಸ್ ಕ್ರಾಫ್ಟ್ ಗಳನ್ನು ಬಳಸಿಕೊಂಡು ಹೋದರೆ, 9 ತಿಂಗಳು ಹಿಡಿಯುತ್ತದೆ. ಸತತವಾಗಿ ಇಷ್ಟು ತಿಂಗಳ ಕಾಲ ತೇಲುವ ಅಥವಾ ಗುರುತ್ವಾಕರ್ಷಣೆ‌ಯಿಲ್ಲದೇ ಮಾನವ ಜೀವಿಸಿದರೆ ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತದೆ. ಹೃದಯ, ಕಣ್ಣು ಹಾಗೂ ಮೂಳೆಗಳ‌ ಮೇಲೆ ಪರಿಣಾಮ ಬೀರುತ್ತದೆ‌ ಎಂದಿದ್ದಾರೆ.

ಆದ್ದರಿಂದ ಕೆಲ ವರ್ಷಗಳ ಮಟ್ಟಿಗೆ ಮಾನವ ಸಹಿತ‌ ಮಂಗಳಯಾನ ಪ್ರಯಾಣವನ್ನು ಮುಂದೂಡಲು ನಿರ್ಧರಿಸಿರುವ ನಾಸಾ, ಪ್ರಯಾಣದ ವೇಳೆ ಪರಮಾಣು ಶಕ್ತಿ ಬಳಸಿಕೊಂಡು, ವಿದ್ಯುತ್ ತಯಾರಿಸುವ ಹಾಗೂ ಗಗನಯಾತ್ರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಮತ್ತಷ್ಟು ಅತ್ಯಾಧುನಿಕ ತಂತ್ರಜ್ಞಾನ ಸಿದ್ಧಪಡಿಸುವ ಕೆಲಸವಾಗಬೇಕಿದ್ದು, ಇದಕ್ಕೆ ಅಗತ್ಯ ಅನುದಾನ ನಾಸಾ ಬಿಡುಗಡೆಗೊಳಿಸಬೇಕಿದೆ ಎಂದು ಇನ್ನೊಬ್ಬ ಗಗನಯಾತ್ರಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...