alex Certify
ಕನ್ನಡ ದುನಿಯಾ       Mobile App
       

Kannada Duniya

‘ಎದ್ದೇಳಿ ವಿಶ್ವದ ಪ್ರಭಾವಿ ಪ್ರಧಾನಿ ಬರುತ್ತಿದ್ದಾರೆ’

modi-d

ಜೆರುಸಲೇಂ: ‘ಎದ್ದೇಳಿ….ಜಗತ್ತಿನ ಅತ್ಯಂತ ಪ್ರಮುಖ ಪ್ರಧಾನಿ ಬರುತ್ತಿದ್ದಾರೆ’ ಹೀಗೆಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಆಗಮನದ ಕುರಿತು ಇಸ್ರೇಲ್ ಪತ್ರಿಕೆ ಪ್ರಕಟಿಸಿದೆ.

ಇಸ್ರೇಲ್ ವಾಣಿಜ್ಯ ಪತ್ರಿಕೆ ‘ದಿ ಮಾರ್ಕರ್’ ಭಾರತ ಮತ್ತು ಇಸ್ರೇಲ್ ಸಂಬಂಧಗಳ ಕುರಿತಾಗಿ ಲೇಖನವನ್ನು ಪ್ರಕಟಿಸಿದೆ.

ಜುಲೈ 4 ರಂದು ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ. ಈ ಬಗ್ಗೆ ‘ದಿ ಮಾರ್ಕರ್’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದು, 125 ಕೋಟಿ ಭಾರತೀಯರ ಪ್ರತಿನಿಧಿ ಬರುತ್ತಿದ್ದಾರೆ. ಅವರನ್ನು ಗಮನಿಸಿ ಎಂದು ಹೇಳಲಾಗಿದೆ.

ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಹೊಂದಿದ್ದು, ಈ ದೇಶದ ಪ್ರತಿನಿಧಿ ಮೋದಿ ಜಗತ್ತಿನ ಗಮನಸೆಳೆದಿದ್ದಾರೆ ಎಂದು ಹೇಳಿದೆ. ಅದೇ ರೀತಿ ಮೋದಿ ಇಸ್ರೇಲ್ ಭೇಟಿಯ ಕುರಿತು ಬೇರೆ ಪತ್ರಿಕೆಗಳು ವ್ಯಾಪಕವಾದ ವರದಿಗಳನ್ನು ಪ್ರಕಟಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...