alex Certify
ಕನ್ನಡ ದುನಿಯಾ       Mobile App
       

Kannada Duniya

ನರೇಂದ್ರ ಮೋದಿ ಅವರಿಗೆ ಟೈಮ್ ಮ್ಯಾಗಝೀನ್ ‘ವರ್ಷದ ವ್ಯಕ್ತಿ’ ಗೌರವ

modi

ಪ್ರಧಾನಿ ಮೋದಿ ಟೈಮ್ ಮ್ಯಾಗಝೀನ್ ನಡೆಸಿದ ವರ್ಷದ ವ್ಯಕ್ತಿ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಅತಿ ಹೆಚ್ಚು ಓದುಗರ ಮತ ಗಳಿಸುವ ಮೂಲಕ ವರ್ಷದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್, ಬರಾಕ್ ಒಬಾಮಾ, ಜೂಲಿಯನ್ ಅಸ್ಸಾಂಜೆ ಎಲ್ಲರನ್ನೂ ಮೋದಿ ಭಾರೀ ಮತಗಳ ಅಂತರದಿಂದ ಹಿಂದಿಕ್ಕಿದ್ದಾರೆ. ಮೋದಿಗೆ ಶೇ.18ರಷ್ಟು ಮತಗಳು ದೊರೆತಿದ್ದು, ಈ ಮೂವರಿಗೆ ಶೇ.7ರಷ್ಟು ಓದುಗರು ಮಾತ್ರ ಮೆಚ್ಚಿಕೊಂಡಿದ್ದಾರೆ. ಮಾರ್ಕ್ ಜುಕರ್ಬರ್ಗ್ ಶೇ.2ರಷ್ಟು ಹಾಗೂ ಹಿಲರಿ ಕ್ಲಿಂಟನ್ ಶೇ.4ರಷ್ಟು ಮತಗಳನ್ನು ಪಡೆದಿದ್ದಾರೆ.

ಬ್ರಿಟನ್ ಪ್ರಧಾನಿ ತೆರೇಸಾ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಉತ್ತರ ಕೊರಿಯಾದ ಕಿಮ್ ಕಜೊಂಗ್ ಉನ್, ಎಫ್ ಬಿ ಐ ಮುಖ್ಯಸ್ಥ ಜೇಮ್ಸ್ ಕೊಮೇ, ಆ್ಯಪಲ್ ಸಿಇಓ ಟಿಮ್ ಕುಕ್ ಸೇರಿದಂತೆ ಹಲವು ಗಣ್ಯರು ರೇಸ್ ನಲ್ಲಿದ್ರು.

ಭ್ರಷ್ಟಾಚಾರದ ವಿರುದ್ಧ ಹೋರಾಡಲು ನೋಟು ನಿಷೇಧ ಮಾಡಿರುವ ಮೋದಿ ವಿಶ್ವದಾದ್ಯಂತ ಭಾರೀ ಜನಮನ್ನಣೆ ಗಳಿಸಿದ್ದಾರೆ. ‘ಟೈಮ್ ಪರ್ಸನ್ ಆಫ್ ದಿ ಇಯರ್’ ಅತ್ಯಂತ ಗೌರವಯುತ ಪುರಸ್ಕಾರವಾಗಿದ್ದು, ಕಳೆದ 12 ತಿಂಗಳುಗಳಲ್ಲಿ ಅತ್ಯಂತ ಜನಮನ್ನಣೆ ಗಳಿಸಿದವರಿಗೆ ಅದನ್ನು ಕೊಡಲಾಗುತ್ತದೆ. ಸತತ ನಾಲ್ಕು ವರ್ಷಗಳಿಂದ ಮೋದಿ ಸ್ಪರ್ಧಿಗಳಲ್ಲೊಬ್ಬರಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...