alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ವಿರುದ್ದ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ

ಲಂಡನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ಭಾರತ ಎಂದಿಗೂ ಭಯೋತ್ಪಾದನೆ ರಫ್ತನ್ನು ಸಹಿಸದು ಎಂದು ಪಾಕ್‌ ಗೆ ಪರೋಕ್ಷವಾಗಿ ಛಾಟಿ ಬೀಸಿದ್ದಾರೆ.

ಭಾರತ ಬದಲಾಗಿದೆ. ಉಗ್ರವಾದ ರಫ್ತು ಮಾಡುವವರಿಗೆ ಎಚ್ಚರಿಕೆ. ಇನ್ನು ಮೇಲೆ ನಿಮ್ಮ ಆಟ ನಡೆಯದು ಎಂದು ಪಾಕ್‌ ಗೆ ತಿರುಗೇಟು ನೀಡಿದ್ದಾರೆ.

ಬ್ರಿಟನ್‌ನಲ್ಲಿ ತಮ್ಮ ಸರ್ಕಾರದ ಸಾಧನೆಯನ್ನು ಅನಾವರಣ ಮಾಡುತ್ತಾ ಮೋದಿ, ಜನ ತಮ್ಮ ಸರ್ಕಾರದ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟಿದ್ದಾರೆ. ಅಲ್ಲದೆ ನಮ್ಮ ಸರ್ಕಾರದಿಂದ ಹೆಚ್ಚಿನ ಕೆಲಸವನ್ನು ಬಯಸುತ್ತಿದ್ದಾರೆ. ಇನ್ನು ಜನ ಬದಲಾವಣೆಗೆ ಕಾಯ್ದು ಕುಳಿತುಕೊಳ್ಳುವ ದಿನಗಳು ಮುಗಿದಿವೆ ಎಂದರು.

ಬಡ ಕುಟುಂಬದಲ್ಲಿ ಹುಟ್ಟಿದ್ದರಿಂದ ಬಡತನ ಏನು ಎಂಬುದು ನನಗೆ ಚೆನ್ನಾಗಿ ಗೊತ್ತು. ಆ ನಿಟ್ಟಿನಲ್ಲಿ ನನ್ನ ಕೆಲಸವನ್ನು ಮುಂದುವರೆಸುವೆ. ಅಲ್ಲದೆ ಬಡವರಿಗೆ ಮೂಲಭೂತವಾಗಿ ಏನು ಬೇಕು ಎಂಬುದು ನನಗೆ ಅರಿವಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...