alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸದತ್ತ ಎಲ್ಲರ ಚಿತ್ತ

narendra_bhai_1499071078_618x347

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಐತಿಹಾಸಿಕ ಇಸ್ರೇಲ್ ಪ್ರವಾಸ ನಾಳೆಯಿಂದ ಶುರುವಾಗಲಿದೆ. ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಸ್ರೇಲ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಮೋದಿ ಇಸ್ರೇಲ್ ಪ್ರವಾಸ ಭಾರತದ ಇತಿಹಾಸದಲ್ಲಿ ದಾಖಲೆಯಾಗಲಿದೆ. ಈವರೆಗೆ ಭಾರತದ ಯಾವ ಪ್ರಧಾನಮಂತ್ರಿಯೂ ಇಸ್ರೇಲ್ ಪ್ರವಾಸ ಕೈಗೊಂಡಿಲ್ಲ. ಹಾಗಾಗಿ ಮೋದಿ ಭೇಟಿ ಮೇಲೆ ಎಲ್ಲರ ಕಣ್ಣಿದೆ.

ಮೋದಿ ಇಸ್ರೇಲ್ ಪ್ರವಾಸದಿಂದ ಭಾರತದ ರಕ್ಷಣಾ ನೀತಿ ಹಾಗೂ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲ ಪಡೆಯಲಿದೆ ಎಂದು ನಂಬಲಾಗ್ತಾ ಇದೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಇಸ್ರೇಲ್ ನಲ್ಲಿ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಅಲ್ಲಿನ ಪತ್ರಿಕೆಯೊಂದು ಮೋದಿ ಆಗಮನದ ಬಗ್ಗೆ ಬರೆದಿತ್ತು. ಎದ್ದೇಳಿ, ವಿಶ್ವದ ಅತ್ಯಂತ ಶಕ್ತಿಶಾಲಿ ಪ್ರಧಾನಿ ಬರ್ತಿದ್ದಾರೆಂದು ಪತ್ರಿಕೆ ವರದಿ ಮಾಡಿತ್ತು.

ಮೋದಿ ಇಸ್ರೇಲ್ ಭೇಟಿ ಮೇಲೆ ಭಾರತೀಯರ ನಿರೀಕ್ಷೆ ಹೆಚ್ಚಿದೆ. ಎರಡೂ ದೇಶಗಳು ಐಟಿ, ಕೃಷಿ ಸೇರಿದಂತೆ ಕೆಲ ಒಪ್ಪಂದಗಳಿಹೆ ಸಹಿ ಹಾಕಲಿವೆ. ಗಂಗಾ ನದಿಯ ಒಂದು ಭಾಗ ಸ್ವಚ್ಛತೆ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇಸ್ರೇಲ್ ಜೊತೆ ಉತ್ತಮ ಸಂಬಂಧ ಬೆಳೆಸುವ ಹಿನ್ನೆಲೆಯಲ್ಲಿ ಮೋದಿ ಪ್ಯಾಲೆಸ್ಟೈನ್ ನಿಂದ ದೂರವುಳಿದಿದ್ದಾರೆ. ಇಸ್ರೇಲ್ ಭೇಟಿ ಮೊದಲು ಅಥವಾ ನಂತ್ರ ಕೆಲ ದಿನ ಮೋದಿ ಪ್ಯಾಲೆಸ್ಟೈನ್ ಗೆ ಭೇಟಿ ನೀಡುವುದಿಲ್ಲ. ಈ ಹಿಂದೆ ಎರಡೂ ದೇಶಗಳ ನಡುವೆ ಉತ್ತಮ ಬಾಂಧವ್ಯ ಹೊಂದಲು ಭಾರತ ಎರಡೂ ದೇಶಗಳ ಪ್ರತಿನಿಧಿಗಳನ್ನು ಒಟ್ಟಿಗೆ ಭೇಟಿ ಮಾಡ್ತಾ ಇತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...