alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದ ಈ ಬಾಲಕಿ ಮೋದಿ ಅಭಿಮಾನಿ

pakistani-girl-aqeedat

ಶತ್ರುರಾಷ್ಟ್ರ ಪಾಕಿಸ್ತಾನದಲ್ಲೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿಮಾನಿಗಳಿದ್ದಾರೆ. ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ 11 ವರ್ಷದ ಬಾಲಕಿಯೊಬ್ಬಳು ಮೋದಿಗೆ ಶುಭಾಶಯ ಹೇಳಿದ್ದಾಳೆ.

ಅಕೀದತ್ ನವೀದ್ ಎಂಬ ಬಾಲಕಿ, ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದು, ಇನ್ಮುಂದೆ ಭಾರತೀಯರು ಮತ್ತು ಪಾಕಿಸ್ತಾನೀಯರ ಹೃದಯ ಗೆಲ್ಲಲು ಪ್ರಯತ್ನಿಸಿ, ಉಭಯ ರಾಷ್ಟ್ರಗಳ ಮಧ್ಯೆ ಶಾಂತಿಯ ಸೇತುವೆಯಾಗಿ ಅಂತಾ ಮನವಿ ಮಾಡಿದ್ದಾಳೆ. ಭಾರತ-ಪಾಕಿಸ್ತಾನ ಮಧ್ಯೆ ಶಾಂತಿ ನೆಲೆಸುವ ಅಗತ್ಯವಿದ್ದು, ಈ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಅಂತಾ ಬರೆದಿದ್ದಾಳೆ.

ಇನ್ಮೇಲೆ ಬುಲೆಟ್ ಬದಲು ಪುಸ್ತಕ ಕೊಳ್ಳೋಣ, ಗನ್ ಗಳ ಬದಲು ಬಡವರಿಗಾಗಿ ಔಷಧ ಕೊಳ್ಳೋಣ ಅಂತಾ 2 ಪುಟಗಳ ಪತ್ರದಲ್ಲಿ ಮನವಿ ಮಾಡಿದ್ದಾಳೆ. ಲಾಹೋರ್ ನ ಬಾಲಕಿ ಅಕೀದತ್ 5 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈ ಹಿಂದೆ ಕೂಡ ಭಾರತ-ಪಾಕ್ ನಡುವಣ ಸಂಘರ್ಷ ಅಂತ್ಯಕ್ಕೆ ಪ್ರಯತ್ನಿಸುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಪತ್ರ ಬರೆದಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...