alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಪತ್ನಿಗೆ ಮೋದಿ ನೀಡಿದ್ರು ಈ ಗಿಫ್ಟ್

modi_8_1498530115_749x421

ಆ ಕ್ಷಣಕ್ಕಾಗಿ ಇಡೀ ವಿಶ್ವವೇ ಕಾದು ಕುಳಿತಿತ್ತು. ಕೊನೆಗೂ ಆ ಕ್ಷಣ ಬಂದೇ ಬಿಡ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲಿ ಭೇಟಿಯಾದ್ರು. ಉಭಯ ದೇಶದ ನಾಯಕರು ಇದೇ ಮೊದಲ ಬಾರಿ ಮುಖಾಮುಖಿಯಾದ್ರು. ಈ ವೇಳೆ ಟ್ರಂಪ್ ಪತ್ನಿ ಮೆಲಾನಿಯಾ ಕೂಡ ಅವರ ಜೊತೆಗಿದ್ದರು. ಭಯೋತ್ಪಾದನೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಟ್ರಂಪ್-ಮೋದಿ ಮಾತುಕತೆ ನಡೆಸಿದ್ರು.

ನರೇಂದ್ರ ಮೋದಿ ಡೊಲಾನ್ಡ್ ಟ್ರಂಪ್ ಪತ್ನಿ ಮೆಲಾನಿಯಾರಿಗೆ ವಿಶೇಷ ಉಡುಗೊರೆಯನ್ನು ನೀಡಿದ್ರು. ಮೋದಿ, ಮೆಲಾನಿಯಾರಿಗೆ ಜಮ್ಮು-ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದಲ್ಲಿ ಕೈನಿಂದ ತಯಾರಾಗುವ ಶಾಲ್ ಹಾಗೂ ಸಿಲ್ವರ್ ಬ್ರೇಸ್ಲೆಟ್ ಉಡುಗೊರೆಯಾಗಿ ನೀಡಿದ್ರು. ಟೀ ಎಲೆ ಹಾಗೂ ಜೇನು ತುಪ್ಪವನ್ನೂ ಮೋದಿ ಮೆಲಾನಿಯಾರಿಗೆ ನೀಡಿದ್ದಾರೆ.

ಡೊಲಾನ್ಡ್ ಟ್ರಂಪ್, ಮೆಲಾನಿಯಾ ಹಾಗೂ ಮಕ್ಕಳಿಗೆ ಭಾರತಕ್ಕೆ ಬರುವಂತೆ ಮೋದಿ ಆಹ್ವಾನ ನೀಡಿದ್ದಾರೆ. ಶೀಘ್ರದಲ್ಲಿಯೇ ಟ್ರಂಪ್ ಭಾರತಕ್ಕೆ ಬರುವ ಸಾಧ್ಯತೆ ಇದೆ.

ಡೊನಾಲ್ಡ್ ಟ್ರಂಪ್ ಮೋದಿಯವರಿಗೆ ಶ್ವೇತಭವನವನ್ನು ತೋರಿಸಿದ್ದಾರೆ. ಅಮೆರಿಕಾ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ರೂಮ್ ಸೇರಿದಂತೆ ಪ್ರತಿಯೊಂದು ಕೋಣೆಯ ಪರಿಚಯ ಮಾಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...