alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದು ಬೆಂಜಮಿನ್ ಜೊತೆ ಮೋದಿ ನಡೆಸಲಿದ್ದಾರೆ ಸುದ್ದಿಗೋಷ್ಠಿ

modi4_oc8zbye

ಸದ್ಯ ವಿಶ್ವದ ಕಣ್ಣು ಇಸ್ರೇಲ್ ಮೇಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದ ವಿದೇಶಾಂಗ ನೀತಿಯಲ್ಲಿ ಇತಿಹಾಸ ರಚಿಸಿದ್ದಾರೆ. ಇದೇ ಮೊದಲ ಬಾರಿ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರ ಮೋದಿ ಇಸ್ರೇಲ್  ಗೆ ಪ್ರಯಾಣ ಬೆಳೆಸಿದ್ದು, ಇಂದು ಇಸ್ರೇಲ್ ನಲ್ಲಿ ಎರಡನೇ ದಿನ ಕಳೆಯಲಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಇದಕ್ಕಿಂತ ಮೊದಲು ಮೋದಿ, ಇಸ್ರೇಲ್ ಅಧ್ಯಕ್ಷ ರ್ಯೂವೆನ್ ರಿವ್ಲಿನ್ ಅವರನ್ನು ಭೇಟಿಯಾಗಲಿದ್ದಾರೆ. ನಂತ್ರ ಪ್ರಧಾನ ಮಂತ್ರಿ ನೇತನ್ಯಾಹು ಜೊತೆ ಸಭೆ ನಡೆಸಲಿದ್ದಾರೆ. ಲಂಚ್ ನಂತ್ರ ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಸಹಿ ಬೀಳಲಿದ್ದು, ನಂತ್ರ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಮೋದಿ ವಿರೋಧ ಪಕ್ಷದ ನಾಯಕ ಎಂಕೆ ಐಸಾಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇಂದೇ ಇಸ್ರೇಲ್ ನ ಮ್ಯೂಸಿಯಂ ನೋಡಲಿದ್ದಾರೆ. ಕೊನೆಯ ದಿನವಾದ ಗುರುವಾರ ಮೋದಿ, ಇಸ್ರೇಲ್ ಪ್ರಧಾನಿ ಜೊತೆ ಹೈಫಾ ಸ್ಮಶಾನಕ್ಕೆ ತೆರಳಲಿದ್ದಾರೆ. ಮೊದಲ ಮಹಾಯುದ್ಧದಲ್ಲಿ ಹತರಾದ ಭಾರತೀಯ ಸೈನಿಕರ ಅಂತ್ಯಕ್ರಿಯೆಯನ್ನು ಅಲ್ಲಿ ನಡೆಸಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...