alex Certify
ಕನ್ನಡ ದುನಿಯಾ       Mobile App
       

Kannada Duniya

ನವಾಜ್ ಶರೀಫ್ ತಾಯಿಯ ಆರೋಗ್ಯ ವಿಚಾರಿಸಿದ ಮೋದಿ

modi-dd

ಅಸ್ತಾನಾ: ಕಜಕಿಸ್ತಾನದ ರಾಜಧಾನಿ ಅಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಕೋ ಆಪರೇಟಿವ್ ಆರ್ಗನೈಜೇಷನ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ.

ಈ ಸಂದರ್ಭದಲ್ಲಿ ಮೋದಿ ಹಾಗೂ ಪಾಕ್ ಪ್ರಧಾನಿ ನವಾಜ್ ಶರೀಫ್ ಭೇಟಿಯಾಗಿ ಔಪಚಾರಿಕವಾಗಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

ಶರೀಫ್ ಅವರಿಗೆ ಸರ್ಜರಿ ಬಳಿಕ ಆರೋಗ್ಯದ ಚೇತರಿಕೆ ಮತ್ತು ಅವರ ತಾಯಿಯ ಆರೋಗ್ಯವನ್ನು ವಿಚಾರಿಸಿದ ಮೋದಿ ರಂಜಾನ್ ಶುಭಾಶಯ ಹೇಳಿದ್ದಾರೆ.

ಉಭಯ ದೇಶಗಳ ಮಧ್ಯ ಉದ್ವಿಗ್ನ ಸ್ಥಿತಿ ಇದ್ದು, ಇಬ್ಬರು ನಾಯಕರ ಭೇಟಿಯ ವೇಳೆ ಯಾವುದೇ ಮಹತ್ವದ ವಿಷಯಗಳ ಚರ್ಚೆ ಆಗಿಲ್ಲ. ರಾಜತಾಂತ್ರಿಕ ವಿಚಾರ ಪ್ರಸ್ತಾಪಿಸದೇ ಕೌಟುಂಬಿಕ ವಿಚಾರಗಳನ್ನು ಮಾತ್ರ ಚರ್ಚಿಸಲಾಗಿದೆ.

17 ತಿಂಗಳ ಬಳಿಕ ಮೋದಿ ಹಾಗೂ ಶರೀಫ್ ಭೇಟಿಯಾಗಿದ್ದು, ಯಾವುದೇ ಮಹತ್ವದ ವಿಷಯಗಳ ಕುರಿತಾಗಿ ಮಾತುಕತೆ ನಡೆದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಗೋಪಾಲ್ ಬಾಗ್ಲೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...