alex Certify
ಕನ್ನಡ ದುನಿಯಾ       Mobile App
       

Kannada Duniya

ಬೆತ್ತಲೆಯಾಗಿದ್ದವನು ಹೋಟೆಲ್ ನಲ್ಲಿ ಮಾಡಿದ್ದೇನು..?

handcuffs_1ಆಸ್ಟ್ರಿಯಾದ ವಿಯೆನ್ನಾದಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಹೋಟೆಲ್ ನಲ್ಲಿ ಉಳಿದುಕೊಂಡಿದ್ದವನೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ ಸಂಪೂರ್ಣ ನಗ್ನನಾಗಿ ಮತ್ತೊಂದು ರೂಮ್ ನಲ್ಲಿ ಕಳ್ಳತನ ಮಾಡುವ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ವಿಯೆನ್ನಾದ ಹೋಟೆಲ್ ನಲ್ಲಿ ರೂಮ್ ಮಾಡಿದ್ದ ಈತ, ತನ್ನ ಬಟ್ಟೆಯನ್ನೆಲ್ಲಾ ಕಳಚಿ ಕಿಟಕಿ ಮೂಲಕ ಲಾಕ್ ಮಾಡಲಾಗಿದ್ದ ಮತ್ತೊಂದು ರೂಮ್ ಪ್ರವೇಶಿಸಿದ್ದಾನೆ. ಅಲ್ಲಿ ವಾಚ್, ಹಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾನೆ.

ವಾಪಾಸ್ ತನ್ನ ರೂಮಿಗೆ ತೆರಳುವ ವೇಳೆ ಆತ ಕಿಟಕಿಯಲ್ಲಿ ನೇತಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಹೋಟೆಲ್ ಸಿಬ್ಬಂದಿ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದು, ಅವರು ಬರುವಷ್ಟರಲ್ಲೇ ತನ್ನ ರೂಮ್ ಸೇರಿಕೊಂಡಿದ್ದಾನೆ. ಬಳಿಕ ಆಗಮಿಸಿದ ಪೊಲೀಸರು ನಗ್ನನಾಗಿದ್ದ ಆತನಿಗೆ ಬಟ್ಟೆ ತೊಡಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆತ ಸಂಪೂರ್ಣ ಪಾನಮತ್ತನಾಗಿದ್ದನೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...