alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲ ತಾಣಗಳಲ್ಲಿ ಬೆತ್ತಲಾದ ಡೋನಾಲ್ಡ್ ಟ್ರಂಪ್ ಪತ್ನಿ

Donald-Trump

ಅಮೆರಿಕ ಅಧ್ಯಕ್ಷೀಯ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ನಡುವೆ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿರುವ ಡೋನಾಲ್ಡ್ ಟ್ರಂಪ್ ಪತ್ನಿ, ಮಾಜಿ ರೂಪದರ್ಶಿ ಮಲೆನಿಯಾರ ಬೆತ್ತಲೆ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಹೌದು. ಈಗಾಗಲೇ ಡೋನಾಲ್ಡ್ ಟ್ರಂಪ್ ಪತ್ನಿಯ ಬೆತ್ತಲೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಡೋನಾಲ್ಡ್‌ ಅವರನ್ನು ಮಣಿಸಲು ಕಸರತ್ತು ನಡೆಸುತ್ತಿರುವ ವಿರೋಧ ಪಕ್ಷಗಳು, ಟ್ರಂಪ್‌ ಅವರ ಪತ್ನಿಯ ಬೆತ್ತಲೆ ಫೋಟೊ ಬಳಸಿಕೊಂಡಿವೆ ಎಂಬ ಮಾತೂ ಸಹ ಕೇಳಿ ಬರುತ್ತಿದೆ.

ಈ ವಿಚಾರವಾಗಿ ಕಿಡಿ ಕಾರಿರುವ ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಡೋನಾಲ್ಡ್ ಟ್ರಂಪ್, ಚುನಾವಣೆ ಸೋಲಿನ ಭೀತಿಯಲ್ಲಿರುವ ಹೇಡಿಗಳು ಈ ರೀತಿಯ ಕೆಲಸ ಮಾಡಿದ್ದು, ಇದರಿಂದ ವಿರೋಧಿಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡೋನಾಲ್ಡ್ ಟ್ರಂಪ್ ಅವರ ಪತ್ನಿ ಮಲೆನಿಯಾ, ರೂಪದರ್ಶಿಯೂ ಆಗಿದ್ದು 2000 ರಲ್ಲಿ ಅಲ್ಲಿನ ಪತ್ರಿಕೆಯೊಂದಕ್ಕೆ ಬೆತ್ತಲೆ ಫೋಟೊ ಶೂಟ್‌ ನೀಡಿದ್ದರು. ಈ ಚಿತ್ರವನ್ನೇ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...