alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿ ಪತಿಯಿಂದ ತಪ್ಪಿಸಿಕೊಳ್ಳಲು ಪ್ರಾಣವನ್ನೇ ಪಣವಾಗಿಟ್ಟ ಭೂಪ

man on acಚೀನಾದಲ್ಲಿ ನಡೆದಿರುವ ಪ್ರಕರಣವೊಂದರ ವರದಿ ಓದಿದ್ರೆ ದಂಗಾಗುತ್ತೀರಿ. ಪ್ರೇಯಸಿಯ ಮನೆಗೆ ಆಕೆಯ ಪತಿ ಇಲ್ಲದ ಸಮಯದಲ್ಲಿ ಹೋಗಿದ್ದ ವ್ಯಕ್ತಿಯೊಬ್ಬ ಆಕೆಯ ಪತಿ ಅನಿರೀಕ್ಷಿತವಾಗಿ ಬಂದ ವೇಳೆ ತಪ್ಪಿಸಿಕೊಳ್ಳಲು ಪ್ರಾಣವನ್ನೇ ಪಣವಾಗಿ ಒಡ್ಡಿದ್ದಾನೆ.

ಪ್ರೇಯಸಿಯ ಪತಿ ಬಾಗಿಲು ಬಡಿಯುತ್ತಿದ್ದಂತೆಯೇ ಗಾಬರಿ ಬಿದ್ದ ಆತ, ಅರೆ ಬೆತ್ತಲೆಯಾಗಿಯೇ ಕಿಟಕಿ ಮೂಲಕ ಎಂಟನೇ ಅಂತಸ್ತಿನ ಮೇಲಿದ್ದ ಎಸಿ ಮೇಲಿಳಿದು ಅದನ್ನು ಹಿಡಿದುಕೊಂಡು ಅಡಗಿ ಕುಳಿತಿದ್ದಾನೆ.

ಎದುರಿನ ಅಪಾರ್ಟ್ಮೆಂಟ್ ನಲ್ಲಿದ್ದವರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ. ಈತ ಎಸಿ ಹಿಡಿದು ಕೂತಿದ್ದ ವೇಳೆ ಕೆಳಗಡೆ ನೂರಾರು ಜನರು ಓಡಾಡುತ್ತಿದ್ದರೂ ಯಾರ ಗಮನಕ್ಕೂ ಬಂದಿಲ್ಲ. ಈ ವ್ಯಕ್ತಿ ತನ್ನ ಪ್ರೇಯಸಿಯ ಪತಿ ಕೈಗೆ ಸಿಕ್ಕಿ ಬಿದ್ದನಾ ಅಥವಾ ಅತ ಹೋದ ಬಳಿಕ ಮತ್ತೇ ಮೇಲೆ ಏರಿ ಅಲ್ಲಿಂದ ಹೋದನಾ ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...