alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಕ್ತಿಯ ಹೃದಯ ಹೊಕ್ಕಿದೆ 3.5 ಇಂಚು ಉದ್ದದ ಮೊಳೆ

gun

ಅಮೆರಿಕದ ವಿಸ್ಕನ್ಸನ್ ನಗರದಲ್ಲಿ 52 ವರ್ಷದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾನೆ. ಆಕಸ್ಮಿಕವಾಗಿ ಗನ್ ನಿಂದ ಸಿಡಿದ ಮೊಳೆಯೊಂದು ಆತನ ಹೃದಯಕ್ಕೇ ಹೊಕ್ಕಿದೆ.

ಡೌಗ್ ಬರ್ಗೆನ್ಸನ್ ಎಂಬಾತ ಮನೆಯಲ್ಲೇ ಕೃಷಿ ಕೆಲಸ ಮಾಡ್ತಾ ಇದ್ದ. ನೇಲ್ ಗನ್ ಅನ್ನು ಕೈಯಲ್ಲಿ ಹಿಡಿದಿದ್ದ. ಆದ್ರೆ ಟ್ರಿಗರ್ ಒತ್ತೋದ್ರೊಳಗೆ ಆತನ ಕೈತಗುಲಿ ಅದು ಸಿಡಿದುಬಿಟ್ಟಿದೆ. ವೇಗವಾಗಿ ಬಂದ ಮೊಳೆ ಡೌಗ್ ನ ಹೃದಯಕ್ಕೆ ಹೊಕ್ಕಿದೆ. ಮೂರೂವರೆ ಇಂಚು ಉದ್ದದ ಮೊಳೆ ಸುಮಾರು ಒಂದು ಇಂಚಿನಷ್ಟು ಒಳಕ್ಕೆ ತೂರಿಕೊಂಡಿತ್ತು.

ಡೌಗ್ ಉಸಿರಾಡಿದಂತೆಲ್ಲ ಮೊಳೆ ಕೂಡ ಅಲ್ಲಾಡುತ್ತಿತ್ತು. ಕೂಡಲೇ ಡೌಗ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ತೆರೆದ ಹೃದಯ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಆ ಮೊಳೆಯನ್ನು ಹೊರಕ್ಕೆ ತೆಗೆದಿದ್ದಾರೆ. ಮೊಳೆ ಇನ್ನೊಂದು ಚೂರು ಒಳಕ್ಕೆ ಹೋಗಿದ್ರೂ ಡೌಗ್ ನ ಪ್ರಾಣಕ್ಕೇ ಅಪಾಯವಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...