alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತ್ಯಂತ ಹಿರಿಯ ಮಹಿಳೆ ಇನ್ನಿಲ್ಲ

ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಜಪಾನ್ ನ 117 ವರ್ಷದ ನಬಿ ತಜಿಮಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜನವರಿಯಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳೀಯ ಕಾಲಮಾನ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಚಿರನಿದ್ರೆಗೆ ಜಾರಿದ್ದಾರೆ.

ಜಪಾನ್ ನ ಕಿಕಾಯಿ ಪಟ್ಟಣದ ನಿವಾಸಿಯಾಗಿದ್ದ ನಬಿ ತಜಿಮಾ ಮಕ್ಕಳು, ಮೊಮ್ಮಕ್ಕಳು, ಕಿರಿ ಮಕ್ಕಳು ಸೇರಿದಂತೆ 160 ಕ್ಕೂ ಅಧಿಕ ಕುಟುಂಬ ಸದಸ್ಯರನ್ನು ಅಗಲಿದ್ದಾರೆ. ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಜಮೈಕಾದ ವೈಲೆಟ್ ಬ್ರೌನ್ ನಿಧನದ ಬಳಿಕ ಆ ಪಟ್ಟ ನಬಿ ತಜಿಮಾರ ಪಾಲಾಗಿತ್ತು.

ಈಗ ನಬಿ ತಜಿಮಾ ಕೊನೆಯುಸಿರೆಳೆದಿರುವ ಕಾರಣ ಜಪಾನ್ ನ ಮತ್ತೊಬ್ಬ ಮಹಿಳೆ 116 ವರ್ಷದ ಚಿಯೊ ಯುಶಿಡೋ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...