alex Certify
ಕನ್ನಡ ದುನಿಯಾ       Mobile App
       

Kannada Duniya

ನೆಲದ ಮೇಲೆ ನಡೆದಾಡುವ ಮೀನು..!

walking-fish_650x400_71496820714

ಹಾರುವ ಮೀನಿನ ಬಗ್ಗೆ ನೀವೆಲ್ಲ ಕೇಳಿರ್ತೀರಾ ನೋಡಿರ್ತೀರಾ, ಆದ್ರೆ ನೆಲದ ಮೇಲೆ ನಡೆದಾಡುವ ಮೀನೊಂದು ವಿಜ್ಞಾನ ಲೋಕವನ್ನೇ ಅಚ್ಚರಿಯಲ್ಲಿ ಮುಳುಗಿಸಿದೆ. ಇಂಡೋನೇಷ್ಯಾದ ಬಾಲಿ ಕರಾವಳಿ ತೀರದಲ್ಲಿ ನಡೆದಾಡುವ ಮೀನು ಪತ್ತೆಯಾಗಿದೆ. ಈ ಮೀನಿಗೆ ಎರಡು ಕಾಲುಗಳಿದ್ದು, ಸಮುದ್ರ ತೀರದುದ್ದಕ್ಕೂ ನಡೆದಾಡುತ್ತಿತ್ತು.

ಕೇಸರಿ ಹಾಗೂ ಕಂದು ಬಣ್ಣ ಮಿಶ್ರಿತ ಈ ಮೀನಿನ ನಡಿಗೆಯನ್ನು ಫ್ರಾನ್ಸ್ ನ ಚಾಲಕನೊಬ್ಬ ಸೆರೆಹಿಡಿದಿದ್ದಾನೆ. ಇದೊಂದು ರೀತಿಯ ಸ್ಟಿಂಗ್ ಮೀನಿರಬಹುದು ಅಂತಾ ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅಥವಾ ನಿಗೂಢ ಜೀವಿಯಾಗಿರಬಹುದು ಎನ್ನುತ್ತಿದ್ದಾರೆ.

ನ್ಯಾಶನಲ್ ಜಿಯಾಗ್ರಫಿಕ್ ನಲ್ಲೂ ಈ ಮಿಸ್ಟರಿ ಫಿಶ್ ಬಗ್ಗೆ ವರದಿ ಮಾಡಲಾಗಿದೆ. ಮೀನಿನ ತಲೆಯಿಂದ ಕೆಳಭಾಗದಲ್ಲೇ ಎರಡು ಕಾಲುಗಳಿವೆ. ಮುಖ ಮೀನಿಗಿಂತ ಕೊಂಚ ಭಿನ್ನವಾಗಿದೆ. ಆದ್ರೆ ದೇಹದ ಆಕೃತಿ ಮಾತ್ರ ಥೇಟ್ ಮತ್ಸ್ಯದಂತಿದ್ದು, ನಡೆದಾಡುವ ಫಿಶ್ ಈಗ ಕುತೂಹಲದ ಕೇಂದ್ರಬಿಂದುವಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...