alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಲ್ಲಿ ಗುಜರಿಯಾಗಿವೆ ದುಬಾರಿ ಕಾರುಗಳು, ಯಾಕೆ ಗೊತ್ತಾ…?

ಐಶಾರಾಮಿ ಕಾರುಗಳ ಖರೀದಿ ಪ್ರತಿಯೊಬ್ಬರ ಕನಸಾಗಿರುತ್ತೆ. ಆದ್ರೆ ಇದು ಎಲ್ಲರಿಗೂ ಸಾಧ್ಯವಾಗದ ಮಾತು. ಕೋಟಿ ಕೊಟ್ಟು ಕಾರು ಕೊಂಡುಕೊಳ್ಳೋದು ಅಂದ್ರೆ ಸುಮ್ನೇನಾ….ಆದ್ರೆ ನೀವು ನಂಬ್ತೀರೊ ಬಿಡ್ತಿರೋ, ದುಬೈನಲ್ಲಿ ವಿಶ್ವದ ಅತ್ಯಂತ ದುಬಾರಿ ಕಾರುಗಳು ಕಳೆದ ಕೆಲ ವರ್ಷಗಳಿಂದ ಗುಜರಿಯಾಗಿ ನಿಂತಿವೆ. ಕಾರಣ ಕಾರುಗಳ ಒಡೆಯರೇ ಯಾರೆಂದು ಗೊತ್ತಿಲ್ಲ. ವಾರಸುದಾರರಿಲ್ಲದ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.

ದುಬೈ ಪೊಲೀಸರು ಇಂತಹ ಸುಮಾರು 3 ಸಾವಿರ ಪ್ರಕರಣಗಳನ್ನು ದಾಖಲಿಸಿ, ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳಲ್ಲಿ ಸುಮಾರು 23 ಕಾರುಗಳು ವಿಶ್ವದಲ್ಲೇ ಅತ್ಯಂತ ದುಬಾರಿ ಕಾರುಗಳಾಗಿವೆ. ಇಂತಹ ಬಹುತೇಕ ಕಾರುಗಳು ವಿಮಾನ ನಿಲ್ದಾಣದಲ್ಲಿ ಕಂಡು ಬಂದಿವೆ.

ಸಾವಿರಾರು ಪ್ರಕರಣಗಳು ಬೆಳಕಿಗೆ ಬಂದ್ರೂ ಯಾಕೆ ತಮ್ಮ ಐಶಾರಾಮಿ ಕಾರುಗಳನ್ನು ತೆಗೆದುಕೊಂಡು ಹೋಗಲು ಜನರು ಬರ್ತಿಲ್ಲಾ ಗೊತ್ತಾ. ಇದಕ್ಕೆ ಕಾರಣ ದುಬೈನ ಕಾನೂನು. ಈ ಕಾನೂನಿನ ಪ್ರಕಾರ ಚೆಕ್ ನೀಡಿ ಕಾರು ಕೊಂಡಾಗ, ಚೆಕ್ ಬೌನ್ಸ್ ಆದಲ್ಲಿ ಅಂತಹ ವ್ಯಕ್ತಿ ಜೈಲಿಗೆ ಹೋಗಬೇಕಾಗುತ್ತದೆ. ಹೀಗಾಗಿ ದುಬೈನಲ್ಲಿ ಐಶಾರಾಮಿ ಕಾರುಗಳು ಎಲ್ಲೆಂದರಲ್ಲಿ ನಿಂತಿವೆ.

ಆದ್ರೆ ದುಬೈ ಜನರಿಗೆ ಇದೊಂದು ತಮಾಷೆಯಾಗಿದೆ. ಚೆಕ್ ನೀಡಿ ಐಶಾರಾಮಿ ಕಾರು ಖರೀದಿಸೋದು, ಮನಸ್ಸಿಗೆ ಬಂದಂತೆ ಸುತ್ತೋದು, ನಂತರ ಚೆಕ್ ಬೌನ್ಸ್ ಆಗ್ತಿದ್ದಂತೆ, ಆ ಕಾರನ್ನ ಅಲ್ಲೇ ಬಿಟ್ಟು ಪರಾರಿಯಾಗ್ತಿದ್ದಾರೆ.

ದುಬೈನ ಏರ್ ಪೋರ್ಟ್ ಒಂದರಲ್ಲಿ ಸಿಕ್ಕ 5 ಕೋಟಿ ಮೌಲ್ಯದ ಫೆರಾರಿ ಎಂಝೋ ಸೂಪರ್ ಕಾರಿಗೆ ಇದುವರೆಗೂ ಯಾರು ಮಾಲೀಕರೆಂದು ಪೊಲೀಸರಿಗೆ ತಿಳಿದಿಲ್ಲ. ಜೊತೆಗೆ ಕಾರಿನ ರಿಜಿಸ್ಟ್ರೇಷನ್ ನಂಬರ್ ಕೂಡಾ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...