alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಕುತೂಹಲಕ್ಕೆ ಕಾರಣವಾಗಿದೆ ಈ ವಿಚಿತ್ರ ವಸ್ತು…!

ದಕ್ಷಿಣ ಕೆರೋಲಿನಾದ ದ್ವೀಪದ ಸಮುದ್ರ ತೀರದಲ್ಲಿ ನಿಗೂಢವಾದ ಬೃಹತ್ ಗಾತ್ರದ ವಸ್ತುವೊಂದು ಕಂಡುಬಂದಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಇದುವರೆಗೂ ಅದು ಯಾವ ವಸ್ತು, ಹಾಗೂ ಎಲ್ಲಿಂದ ಬಂದಿದೆ ಎಂಬುದು ಮಾತ್ರ ರಹಸ್ಯವಾಗಿಯೇ ಇದೆ.

ಲೋಕಂಟ್ರಿ ಮರೈನ್ ಮ್ಯಾಮಲ್ ನೆಟ್ ವರ್ಕ್ ಮತ್ತು ತಿಮಿಂಗಲ ಮತ್ತು ಡಾಲ್ಫಿನ್ ಗಳ ರಕ್ಷಣೆ ಕಾರ್ಯ ನಿರ್ವಹಿಸುವ ಲಾಭರಹಿತ ಸಂಸ್ಥೆಯ ಕಾರ್ಯಕರ್ತರಿಗೆ ಈ ವಿಚಿತ್ರ ಆಕಾರದ ವಸ್ತು ಕಂಡುಬಂದಿದ್ದು, ಅದರ ಫೋಟೋವನ್ನು ಕಳೆದ ವಾರವಷ್ಟೇ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಲ್ಲದೆ, ಈ ವಸ್ತು ಏನು ಎಂದು ಊಹಿಸಲು ಕೇಳಿದ್ದಾರೆ.

ಸಿಲಿಂಡರ್ ಆಕೃತಿಯಲ್ಲಿದ್ದು, ಕಾಂಕ್ರೀಟ್ ಅಥವಾ ಮೆಟಲ್ ನಿಂದ ತಯಾರಿಸಿರಬಹುದೇ ಎಂಬ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಈ ವಿಚಿತ್ರ ಫೋಟೋ ಕಂಡ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಬಂದು ವಶಕ್ಕೆ ಪಡೆದಿದ್ದಾರೆ. ಆದರೆ, ಅವರಿಗೂ ಸಹ ಈ ವಸ್ತು ಏನೆಂಬುದು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಇದರ ಮೂಲದ ಪರಿಶೀಲನೆ ನಡೆಯುತ್ತಿದೆ. ದಕ್ಷಿಣ ಕೆರೋಲಿನಾದ ಇನ್ನೊಂದು ದ್ವೀಪವಾದ ಕಿಯಾವಾಹ್ ನಲ್ಲಿ ಇದೇ ರೀತಿಯ ಇನ್ನೊಂದು ವಸ್ತು ಕಂಡುಬಂದಿದ್ದು, ಈ ಮೊದಲಿನ ವಿಚಿತ್ರ ವಸ್ತುವಿನ ಇನ್ನೊಂದು ಭಾಗ ಇರಬಹುದೇ ಎಂದು ಶಂಕಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...