alex Certify
ಕನ್ನಡ ದುನಿಯಾ       Mobile App
       

Kannada Duniya

ಕರಾಚಿ ಜನರನ್ನು ಕೆರಳಿಸಿದೆ ಸಿಂಹದ ಮಾಲೀಕನ ಕೃತ್ಯ

lion-pakistan-650_650x400_41497529506

ಪಾಕಿಸ್ತಾನದ ಕರಾಚಿಯಲ್ಲಿ ಶೋಕಿವಾಲನೊಬ್ಬ ತನ್ನ ಪ್ರೀತಿಯ ಸಿಂಹವನ್ನು ತೆರೆದ ವಾಹನದಲ್ಲಿ ಲಾಂಗ್ ಡ್ರೈವ್ ಗೆ ಕರೆದುಕೊಂಡು ಹೋಗಿದ್ದ. ತೆರೆದ ವಾಹನದಲ್ಲಿ ಕುಳಿತಿದ್ದ ಆ ಸಿಂಹ ವ್ಯಘ್ರವಾಗಿತ್ತು. ಜನರನ್ನು ಕಂಡಕೂಡ್ಲೆ ವಾಹನದಿಂದ ಕೆಳಗ್ಗೆ ಜಿಗಿಯಲು ಪ್ರಯತ್ನಿಸ್ತಾ ಇತ್ತು.

ತೆರೆದ ವಾಹನದಲ್ಲಿ ಕೆರಳಿದ ಸಿಂಹದ ಸವಾರಿ ನೋಡಿ ಜನರಂತೂ ಅಕ್ಷರಶಃ ಬೆಚ್ಚಿಬಿದ್ದಿದ್ರು. ಮಹಿಳೆಯೊಬ್ಳು ಈ ದೃಶ್ಯವನ್ನು ಮೊಬೈಲ್ ನಲ್ಲೂ ಸೆರೆಹಿಡಿದಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ. ಕರಾಚಿಯ ಕರೀಮಾಬಾದ್ ಎಂಬಲ್ಲಿ ನಡೆದ ಘಟನೆ ಇದು.

ಫುಲ್ ಟ್ರಾಫಿಕ್ ಜಾಮ್ ಇರೋ ರಸ್ತೆಯಲ್ಲೇ ಭೂಪ, ಸಿಂಹದ ಜೊತೆಗೆ ಲಾಂಗ್ ಡ್ರೈವ್ ಗೆ ಅಂತಾ ಬಂದಿದ್ದಾನೆ. ಅದೇನಾದ್ರೂ ಸಿಟ್ಟಿಗೆದ್ದು ಜನರ ಮೇಲೆ ಎರಗಿದ್ರೆ ಏನು ಗತಿ ಅನ್ನೋದು ಎಲ್ಲರ ಆತಂಕ. ಈ ವಿಡಿಯೋವನ್ನು ಒಂದು ಮಿಲಿಯನ್ ಜನರು ವೀಕ್ಷಿಸಿದ್ದು, ಸಿಂಹದ ಮಾಲೀಕನ ದುರಹಂಕಾರವನ್ನು ಟೀಕಿಸಿದ್ದಾರೆ. ಆದ್ರೆ ಆತ ಮಾತ್ರ ಸಿಂಹಕ್ಕೆ ಅನಾರೋಗ್ಯವಿತ್ತು, ಅದಕ್ಕೆ ವೈದ್ಯರ ಬಳಿ ಕರೆದೊಯ್ದಿದ್ದೆ ಅಂತಾ ಹೇಳಿಕೊಳ್ತಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...