alex Certify
ಕನ್ನಡ ದುನಿಯಾ       Mobile App
       

Kannada Duniya

ಸತತ 3.5 ಗಂಟೆ ಭಾಷಣ ಮಾಡಿದ್ದಾರೆ ಚೀನಾ ಅಧ್ಯಕ್ಷ

ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮ್ಯಾರಥಾನ್ ಭಾಷಣ ಮಾಡಿದ್ದಾರೆ. ಕಮ್ಯೂನಿಸ್ಟ್ ಪಾರ್ಟಿ ಕಾಂಗ್ರೆಸ್ ನಲ್ಲಿ ಗಣ್ಯರನ್ನು ಉದ್ದೇಶಿಸಿ ಸತತ ಮೂರೂವರೆ ಗಂಟೆಗಳ ಕಾಲ ಮಾತನಾಡಿದ್ದಾರೆ. ಚೀನಾದ ಮಾಜಿ ಅಧ್ಯಕ್ಷರುಗಳು ಮತ್ತು ಮಿಲಿಟರಿ ಅಧಿಕಾರಿಗಳು ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ರು.

ವಿಶೇಷ ಅಂದ್ರೆ ಎಲ್ಲರೂ ಜಿನ್ಪಿಂಗ್ ಭಾಷಣವನ್ನು ಆಸಕ್ತಿಯಿಂದ ಆಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲೆಯಲ್ಲೇ ಜಿನ್ಪಿಂಗ್ ಭಾಷಣ ಕೇಳಲು ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಮಾಧ್ಯಮಗಳಲ್ಲೂ ಯಾವುದೇ ಅಡಚಣೆಯಿಲ್ಲದಂತೆ ಭಾಷಣ ಪ್ರಸಾರ ಮಾಡಲಾಗಿದೆ.

ಚೀನಾದ ಸಾಧನೆ, ಚೀನಾ ಮುಂದಿರುವ ಸವಾಲುಗಳು ಎಲ್ಲವನ್ನೂ ಜಿನ್ಪಿಂಗ್ ತಮ್ಮ ಭಾಷಣದಲ್ಲಿ ಬಿಚ್ಚಿಟ್ಟಿದ್ದಾರೆ. ಬೀಜಿಂಗ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸುಮಾರು 2300 ಗಣ್ಯರು ಸಾಕ್ಷಿಯಾಗಿದ್ದಾರೆ. ಚೀನಾದ ಮಾಜಿ ಅಧ್ಯಕ್ಷ, 91ರ ಹರೆಯದ ಜಿಯಾಂಗ್ ಜೆಮಿನ್ ಅಂತೂ ಮುಂದಿನ ಸಾಲಿನಲ್ಲೇ ಕುಳಿತಿದ್ರು.

3.5 ಗಂಟೆ ಮಾತನಾಡಿದ್ರೂ ಜಿನ್ಪಿಂಗ್ ಗೆ ಆಯಾಸವಾಗಿರಲಿಲ್ಲ. ಆಗಾಗ ನೀರು ಗುಟುಕರಿಸುತ್ತ ಅವರು ಮಾತು ಮುಂದುವರಿಸಿದ್ರು. ಆದ್ರೆ ಗ್ಯಾಲರಿಯಲ್ಲಿ ಕುಳಿತಿದ್ದವರು ಮಾತ್ರ ಎದ್ದು ಹೋಗಲೂ ಆಗದೇ, ಕೂರಲೂ ಆಗದೇ ಪದೇ ಪದೇ ವಾಚ್ ನೋಡುವ ದೃಶ್ಯ ಸಾಮಾನ್ಯವಾಗಿತ್ತು. ಆದ್ರೆ ಸಾಮಾಜಿಕ ತಾಣಗಳಲ್ಲಿ ಜಿನ್ಪಿಂಗ್ ಭಾಷಣದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...