alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ತಾರೆ ಜೊತೆ ಡೇಟಿಂಗ್ ಮಾಡ್ತಿರೋ ಯುವಕ ಹೇಳಿದ್ದೇನು…?

ಪೋರ್ನ್ ಸ್ಟಾರ್ ಅಂದಾಕ್ಷಣ ಪಡ್ಡೆಗಳು ಬಾಯ್ಬಿಡ್ತಾರೆ. ಆದ್ರೆ ಅವರ ಅಸಲಿ ಬದುಕನ್ನು ಹತ್ತಿರದಿಂದ ನೋಡಿದವರು ಬೇಸರಪಟ್ಟುಕೊಳ್ತಾರೆ. ಅಂಥದ್ರಲ್ಲಿ ಪೋರ್ನ್ ತಾರೆ ಜೊತೆಗೆ ಡೇಟಿಂಗ್ ನಡೆಸಿದವರ ಸ್ಥಿತಿ ಹೇಗಿರಬಹುದು ಊಹಿಸ್ಕೊಳ್ಳಿ.

32 ವರ್ಷದ ಯುವಕ ಮೈಕ್ ಅಡ್ಕಿನ್ಸ್ ಕಳೆದ ನಾಲ್ಕು ವರ್ಷಗಳಿಂದ ಖ್ಯಾತ ಪೋರ್ನ್ ಸ್ಟಾರ್ ಆಲೀ ಹೇಜ್ ಜೊತೆಗೆ ಡೇಟಿಂಗ್ ಮಾಡ್ತಿದ್ದಾನೆ. 30ರ ಹರೆಯದ ಆಲೀ ಸಾಕಷ್ಟು ಅಡಲ್ಟ್ ಸಿನೆಮಾಗಳಲ್ಲಿ ನಟಿಸಿದ್ದಾಳೆ.

ಪ್ರತಿನಿತ್ಯ ಬೇರೆ ಬೇರೆ ಪುರುಷರು, ಮಹಿಳೆಯರ ಜೊತೆ ಸೆಕ್ಸ್ ಮಾಡೋದೇ ಅವಳ ಕೆಲಸ. ಇದನ್ನೆಲ್ಲ ನೋಡಿ ಸುಮ್ಮನಿರೋದು ಸಂಗಾತಿಗೆ ನಿಜಕ್ಕೂ ಕಷ್ಟ ಎನಿಸುತ್ತೆ. ಆದ್ರೆ ಮೈಕ್ ಅಡ್ಕಿನ್ಸ್ ಗೆ ಮಾತ್ರ ಸ್ವಲ್ಪವೂ ಹೊಟ್ಟೆಕಿಚ್ಚಿನ ಭಾವನೆ ಮೂಡಿಲ್ಲವಂತೆ.

ಆಲೀಯನ್ನು ಪೋರ್ನ್ ತಾರೆಯಾಗಿ ನೋಡುತ್ತಿಲ್ಲ, ಒಬ್ಬ ವ್ಯಕ್ತಿಯಾಗಿ ಆರಾಧಿಸುತ್ತೇನೆ ಎನ್ನುತ್ತಾನೆ ಮೈಕ್. ಅದೊಂದು ಡಿಫರೆಂಟ್ ವೃತ್ತಿ ಅಷ್ಟೆ ಅಂತಾ ಸಹಜವಾಗಿ ಹೇಳ್ತಾನೆ. ಆಕೆ ಇತರರೊಂದಿಗೆ ಸೆಕ್ಸ್ ಮಾಡಿದ್ರೆ ನನಗೇನೂ ಸಮಸ್ಯೆಯಿಲ್ಲ ಅಂತಾ ಹೇಳಿಕೊಂಡಿದ್ದಾನೆ.

ಆದ್ರೆ ಒಮ್ಮೆಯೂ ಮೈಕ್ ಅವಳ ಶೂಟಿಂಗ್ ಸೆಟ್ ಗೆ ವಿಸಿಟ್ ಮಾಡಿಲ್ಲವಂತೆ. ಆರಂಭದಲ್ಲಿ ಆಕೆ ನಟಿಸಿದ್ದ ಒಂದೆರಡು ಪೋರ್ನ್ ವಿಡಿಯೋಗಳನ್ನು ನೋಡಿದ್ದ. ಆಗ ಮನಸ್ಸಿಗೆ ಸ್ವಲ್ಪ ಕಿರಿಕಿರಿ ಎನಿಸಿತ್ತಂತೆ. ಹಾಗಾಗಿ ಅವಳ ವಿಡಿಯೋಗಳಿಂದ ದೂರವೇ ಇರ್ತಾನೆ ಮೈಕ್.

ಆಲೀ ಸುಮಾರು 8 ವರ್ಷಗಳಿಂದ ಪೋರ್ನ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಿದ್ದಾಳೆ. ಸುಮಾರು 350ಕ್ಕೂ ಹೆಚ್ಚು ಅಡಲ್ಟ್ ಚಿತ್ರಗಳಲ್ಲಿ ನಟಿಸಿದ್ದಾಳೆ. ಮನೆಯಲ್ಲಿ ಮೈಕ್ ಹಾಗೂ ಆಲೀ ಶೂಟಿಂಗ್ ಬಗ್ಗೆ ಆಗ್ಲಿ, ಕೆಲಸದ ವಿಚಾರವಾಗಿಯಾಗ್ಲಿ ಚರ್ಚಿಸೋದಿಲ್ಲ. ವಿಶೇಷ ಅಂದ್ರೆ ಮೈಕ್ ಪೋರ್ನ್ ತಾರೆ ಜೊತೆಗೆ ಡೇಟಿಂಗ್ ಮಾಡ್ತಿದ್ದಾನೆ ಅನ್ನೋದು ಗೊತ್ತಾದ್ರೂ ಆತನ ತಾಯಿ ಕೂಡ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...