alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿ ಗುಂಡು ಹಾರಿಸಿದೆ ಎಂದ ಪೊಲೀಸರಿಗೆ ಕರೆ ಮಾಡಿದಾತ…!

ಇಂತಹ ವಿಲಕ್ಷಣ ಘಟನೆಗಳು ಅಮೆರಿಕಾದಲ್ಲಿ ಮಾತ್ರ ನಡೆಯಬಹುದೇನೋ? ಪೊಲೀಸರ ತುರ್ತು ಸಹಾಯ ವಾಣಿ ನಂಬರ್ 911 ಗೆ ಕರೆ ಮಾಡಿದವನೊಬ್ಬ ನಾಯಿ ತನಗೆ ಗುಂಡು ಹಾರಿಸಿದೆ ಎಂದು ಹೇಳಿದ್ದು, ಕರೆ ಸ್ವೀಕರಿಸಿದ ಪೊಲೀಸ್ ಅಧಿಕಾರಿಯೇ ಇದನ್ನು ಕೇಳಿ ಒಂದು ಕ್ಷಣ ತಡಬಡಾಯಿಸಿದ್ದಾನೆ.

ಹೌದು, ಇಂತದೊಂದು ಘಟನೆ ಅಮೆರಿಕಾದ ಫೋರ್ಟ್ ಡಾಡ್ಜ್ ಎಂಬಲ್ಲಿ ನಡೆದಿದೆ. 51 ವರ್ಷದ ರಿಚರ್ಡ್ ರಿಮ್ಮೆ ಎಂಬಾತ ತನ್ನ ಮನೆಯಲ್ಲೇ ನಾಯಿಗಳೊಂದಿಗೆ ಆಟವಾಡುತ್ತಿದ್ದ. ಅವುಗಳಿಗೆ ಜಂಪ್ ಮಾಡುವ ತರಬೇತಿ ನೀಡುತ್ತಿದ್ದ ರಿಚರ್ಡ್, ತನ್ನ ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡಿದ್ದು, ಅದನ್ನು ಲಾಕ್ ಮಾಡಲು ಮರೆತಿದ್ದನೆನ್ನಲಾಗಿದೆ.

ಹೀಗೆ ಜಂಪ್ ಮಾಡುವ ಸಂದರ್ಭದಲ್ಲಿ ನಾಯಿಯೊಂದು ಟ್ರಿಗ್ಗರ್ ಎಳೆದಿದ್ದು, ರಿವಾಲ್ವರ್ ನಿಂದ ಹಾರಿದ ಗುಂಡು ರಿಚರ್ಡ್ ಕಾಲಿಗೆ ಹೊಕ್ಕಿದೆ. ಆ ನೋವಿನಲ್ಲೂ ಕೂಡಲೇ 911 ಕರೆ ಮಾಡಿದ ರಿಚರ್ಡ್, ನಾಯಿ ಗುಂಡು ಹಾರಿಸಿದೆ ಎಂದಿದ್ದಾನೆ. ಮೊದಲಿಗೆ ಇದೊಂದು ತಮಾಷೆಯ ಕರೆಯಿರಬಹುದು ಎಂದು ಭಾವಿಸಿದ ಪೊಲೀಸರು, ಬಳಿಕ ಆತನಿಂದ ಸಂಪೂರ್ಣ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ರಿಚರ್ಡ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಗೆ ಮರಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...