alex Certify
ಕನ್ನಡ ದುನಿಯಾ       Mobile App
       

Kannada Duniya

ಡೊನಾಲ್ಡ್ ಟ್ರಂಪ್ ಗೆ ರಾಖಿ ಕಳುಹಿಸಿದ ಮಹಿಳೆಯರು

raksha-bandhan-pti

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ರಕ್ಷಾಬಂಧನದ ಬಗ್ಗೆ ಅಲ್ಪಸ್ವಲ್ಪ ಗೊತ್ತಿರಬಹುದು. ಆದರೆ ಈ ವರ್ಷ ರಾಖಿ ಹಬ್ಬದ ಬಗ್ಗೆ ಟ್ರಂಪ್ ಸಂಪೂರ್ಣವಾಗಿ ತಿಳಿಯೋದ್ರಲ್ಲಿ ಸಂಶಯವಿಲ್ಲ. ಯಾಕೆಂದ್ರೆ ಹರ್ಯಾಣದ ಹಳ್ಳಿಯೊಂದರ ಮುಸ್ಲಿಂ ಮಹಿಳೆಯರು ಡೊನಾಲ್ಡ್ ಟ್ರಂಪ್ ಗೆ 1001 ರಾಖಿಯನ್ನು ಕಳುಹಿಸಿದ್ದಾರೆ.

ಮೇವಾತ್ ನ ಮರೋರಾ ಹಳ್ಳಿಯ ಮುಸ್ಲಿಂ ಮಹಿಳೆಯರು ರಾಖಿ ಕಳುಹಿಸಿದ್ದಾರೆ. ಈ ಹಳ್ಳಿಯನ್ನು ದತ್ತು ಪಡೆದಿರುವ ಎನ್ ಜಿ ಓ ಸಂಸ್ಥೆ ಈ ಹಳ್ಳಿಯ ಕೆಲಸದಿಂದ ಭಾರತ –ಅಮೆರಿಕಾ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂದಿದೆ.

ಭಾರತದ ಖ್ಯಾತ ಸಮಾಜ ಶಾಸ್ತ್ರಜ್ಞ, ಸಾಮಾಜಿಕ ಕಾರ್ಯಕರ್ತ ಹಾಗೂ ಸುಲಭ್‌ ಇಂಟರ್‌ನ್ಯಾಷನಲ್‌ ಎನ್‌‌ಜಿಒನ ಸಂಸ್ಥಾಪಕ ಮುಖ್ಯಸ್ಥ ಬಿಂದೇಶ್ವರ ಪಾಠಕ್ ಅವರು ಈ ಗ್ರಾಮಕ್ಕೆ, ಟ್ರಂಪ್‌ ಸುಲಭ್‌ ಗ್ರಾಮ ಎಂದು ನಾಮಕರಣ ಮಾಡಿದ್ದರು. ಈ ವೇಳೆ ಗ್ರಾಮ ಸುದ್ದಿಗೆ ಬಂದಿತ್ತು.

ಟ್ರಂಪ್ ಫೋಟೋ ಇರುವ 1001 ರಾಖಿ ತಯಾರಿಸಿದ್ದಾರೆ ಮಹಿಳೆಯರು. 501 ರಾಖಿಯ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೋಟೋ ಇದೆ. ಆಗಸ್ಟ್ 5 ರಂದು ರಾಖಿಯನ್ನು ಅಮೆರಿಕಾಕ್ಕೆ ಕಳುಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...