alex Certify
ಕನ್ನಡ ದುನಿಯಾ       Mobile App
       

Kannada Duniya

ಕಾನೂನು ಹೋರಾಟದಲ್ಲಿ ಮುಸ್ಲಿಂ ಮಹಿಳೆಗೆ ಸಿಕ್ಕಿದೆ 55 ಲಕ್ಷ ರೂ. ಪರಿಹಾರ

muslim

ಅಮೆರಿಕದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಬಲವಂತವಾಗಿ ಮುಸ್ಲಿಂ ಮಹಿಳೆಯ ಹಿಜಾಬ್ ತೆಗೆಸಿದ್ದ ಪ್ರಕರಣ ಇತ್ಯರ್ಥವಾಗಿದೆ. ಪೊಲೀಸರ ವಿರುದ್ಧ ಕಾನೂನು ಹೋರಾಟ ನಡೆಸಿದ ಮುಸ್ಲಿಂ ಮಹಿಳೆ ಅದರಲ್ಲಿ ಜಯಗಳಿಸಿದ್ದು, 85,000 ಡಾಲರ್ ಪರಿಹಾರ ಪಡೆದುಕೊಂಡಿದ್ದಾಳೆ.

ಲೋ ರೈಡರ್ ಕಾರು ಚಲಾಯಿಸಿದ ಆರೋಪದ ಮೇಲೆ ಕಳೆದ ವರ್ಷ ಕ್ರಿಸ್ಟಿ ಪೊವೆಲ್ ಮತ್ತಾಕೆಯ ಪತಿಯನ್ನು ಪೊಲೀಸರು ಬಂಧಿಸಿದ್ರು. ಈ ವೇಳೆ ಪೊವೆಲ್ ಪತಿಯ ಮನವಿಯ ಹೊರತಾಗಿಯೂ ಮಹಿಳಾ ಪೊಲೀಸ್ ಅಧಿಕಾರಿ, ಆಕೆಯ ಹಿಜಾಬ್ ಅನ್ನು ಬಲವಂತವಾಗಿ ತೆಗೆಸಿದ್ರು.

ಹೆಡ್ ಸ್ಕಾರ್ಫ್ ಇಲ್ಲದೇ ಪೊವೆಲ್ ಜೈಲಿನಲ್ಲಿ ಒಂದು ರಾತ್ರಿ ಕಳೆದಿದ್ಲು. 2016ರ ಎಪ್ರಿಲ್ ನಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ಲು. ಪೊಲೀಸರು ಮಾಡಿದ ಕೃತ್ಯದಿಂದ ತನ್ನ ಧಾರ್ಮಿಕ ಭಾವನೆ ಮತ್ತು ಆತ್ಮಗೌರವಕ್ಕೆ ಧಕ್ಕೆಯಾಗಿದೆ ಅಂತಾ ಪೊವೆಲ್ ಆರೋಪಿಸಿದ್ದಳು. ಈಗ ‘ದಿ ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್’ ಪ್ರಕರಣ ಇತ್ಯರ್ಥಗೊಳಿಸಿ ಪೊವೆಲ್ ಗೆ 85,000 ಡಾಲರ್ ಪರಿಹಾರ ನೀಡುವಂತೆ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...