alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಯಾರ್ಕ್ ನಲ್ಲಿ ಚಿನ್ನದ ಟಾಯ್ಲೆಟ್ ಬಳಕೆಗೆ ಮುಕ್ತ

gold toiletಚಿನ್ನದ ಟಾಯ್ಲೆಟ್ ಮೇಲೆ ಕುಳಿತುಕೊಳ್ಳುವ ಆಸೆಯಿದ್ರೆ ನ್ಯೂಯಾರ್ಕ್ ನಲ್ಲಿ ನಿಮಗೊಂದು ಚಾನ್ಸ್ ಇದೆ. ನ್ಯೂಯಾರ್ಕ್ ನ ಗಗ್ಗೆನ್ಹಿಮ್ ವಸ್ತು ಸಂಗ್ರಹಾಲಯದಲ್ಲಿ ಚಿನ್ನದ ಶೌಚಾಲಯ ಬಳಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ.

ಇದು ಅಪ್ಪಟ ಬಂಗಾರದ ಟಾಯ್ಲೆಟ್, ಮಿರ ಮಿರ ಮಿನುಗುತ್ತಿದೆ. ಮ್ಯೂಸಿಯಂನ ನಾಲ್ಕನೇ ಮಹಡಿಯ ಸ್ನಾನದ ಮನೆಯಲ್ಲಿ ಇದನ್ನು ಇಡಲಾಗಿದೆ. ಇಟಲಿಯ ಕಲಾವಿದ ಮೌರಿಜೋ ಕೆಟಲನ್ ಅವರು ತಯಾರಿಸಿದ ಈ ಬಂಗಾರದ ಶೌಚಾಲಯವನ್ನು ಇದುವರೆಗೂ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

ಕಳೆದ ಶುಕ್ರವಾರದಿಂದ ಪ್ರವಾಸಿಗರಿಗೆ ಚಿನ್ನದ ಟಾಯ್ಲೆಟ್ ನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಅದ್ಭುತ ಟಾಯ್ಲೆಟ್ ನೋಡ್ತಾ ಇದ್ರೆ ಅದರ ಮೇಲೆ ಗಲೀಜು ಮಾಡಲು ಬಹುತೇಕ ಯಾರೂ ಮನಸ್ಸು ಮಾಡುವುದಿಲ್ಲ. ಎಲ್ಲೋ ಅಪರೂಪಕ್ಕೊಬ್ರು ಸಿಕ್ಕ ಚಾನ್ಸ್ ಮಿಸ್ ಮಾಡಿಕೊಳ್ಳಬಾರದು ಅನ್ನೋ ಕಾರಣಕ್ಕೆ ಈ ಚಿನ್ನದ ಶೌಚಾಲಯವನ್ನು ಬಳಸುತ್ತಿರಬಹುದಷ್ಟೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...