alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಶಾಪಗ್ರಸ್ತ ಖುರ್ಚಿ– ಕುಳಿತವರ ಸಾವು ನಿಶ್ಚಿತ

f_1478082374ಕೆಲವೊಂದು ತರ್ಕಕ್ಕೆ ನಿಲುಕದ ಘಟನೆಗಳು ನಡೆಯುತ್ತವೆ. ದೇವರು, ಆತ್ಮ, ಭೂತಗಳಿಲ್ಲ ಅಂತಾ ಕೆಲವರು ಹೇಳಿದ್ರೆ ಮತ್ತೆ ಕೆಲವರು ಎಲ್ಲವೂ ಇವೆ ಎನ್ನುತ್ತಾರೆ. ಈ ವಾದ- ವಿವಾದಗಳ ನಡುವೆ ನಡೆಯುವ ಕೆಲವು ಘಟನೆಗಳಿಗೆ ಉತ್ತರ ಹುಡುಕೋದು ಕಷ್ಟ. ಇಂಗ್ಲೆಂಡ್ ಮ್ಯೂಸಿಯಂನಲ್ಲಿರುವ ಒಂದು ಖುರ್ಚಿ ಭಯದ ಜೊತೆ ಉತ್ತರ ಸಿಗದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಥಾಮಸ್ ಬಸ್ಬಿ ಎಂಬಾತನ ಖುರ್ಚಿ ಇದು. ಖುರ್ಚಿ ಎಂದ್ರೆ ಆತನಿಗೆ ಪಂಚಪ್ರಾಣ. 1702 ರಲ್ಲಿ ತನ್ನ ಖುರ್ಚಿ ಮೇಲೆ ಕುಳಿತಿದ್ದ ಮಾವನನ್ನು ಥಾಮಸ್ ಖುರ್ಚಿ ಮೇಲೆಯೇ ಕೊಲೆ ಮಾಡಿದ್ದ. ಆತನ ಖುರ್ಚಿ ಮೇಲೆ ಬೇರೆ ಯಾರೂ ಕುಳಿತುಕೊಳ್ಳುವುದು ಆತನಿಗೆ ಇಷ್ಟವಿರಲಿಲ್ಲ.

ಆತನ ಸಾವಿನ ನಂತ್ರ ಈ ಖುರ್ಚಿ ಮೇಲೆ ಕುಳಿತುಕೊಂಡ ಒಬ್ಬರೂ ಬದುಕಲಿಲ್ಲವಂತೆ. ಸುಮಾರು 63 ಮಂದಿ ಸಾವನ್ನಪ್ಪಿದ್ದಾರಂತೆ. ಎರಡನೇ ಮಹಾಯುದ್ಧದ ವೇಳೆ ಈ ಖುರ್ಚಿಯನ್ನು ಹಾಟ್ ಸೀಟ್ ಎಂದು ಪರಿಗಣಿಸಲಾಗಿತ್ತು. ಆ ಖುರ್ಚಿ ಮೇಲೆ ಕುಳಿತು ಯುದ್ಧಕ್ಕೆ ಹೋದ ಯಾವೊಬ್ಬ ವ್ಯಕ್ತಿಯೂ ವಾಪಸ್ ಬರಲಿಲ್ಲ. ಅಲ್ಲಿಂದ ಈ ಖುರ್ಚಿಯನ್ನು ಶಾಪಗ್ರಸ್ತ ಎಂದು ಪರಿಗಣಿಸಲಾಗಿದೆ. ಮ್ಯೂಜಿಯಂನಲ್ಲಿ ಖುರ್ಚಿಯನ್ನು ಇಡಲಾಗಿದೆ. ನೆಲದಿಂದ 6 ಅಡಿ ಎತ್ತರಕ್ಕೆ ಇದನ್ನು ತೂಗಿಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...