alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತದಲ್ಲಿಯೂ ನಡೆಯಿತೊಂದು ವಿಶೇಷ !

truck lari

ಸಾಮಾನ್ಯವಾಗಿ ಅಪಘಾತ ಸಂಭವಿಸಿದಾಗ ದುರಂತ ನಡೆದು ತೊಂದರೆ ಅನುಭವಿಸಿದ ಸುದ್ದಿಯನ್ನೇ ಓದಿರುತ್ತೀರಾ? ಅಪಘಾತದಲ್ಲಿಯೂ ವಿಶೇಷ ಘಟನೆಯೊಂದು ಅಮೆರಿಕದಲ್ಲಿ ಜರುಗಿದೆ. ಅಷ್ಟಕ್ಕೂ ಏನಿದು ಘಟನೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಮದ್ಯ ಸೇವಿಸುವಾಗ ಕೆಲವರು ಸುಮ್ಮನೆ ಗಟಗಟ ಕುಡಿದು ಮನೆ ತಲುಪಿದರೆ, ಮತ್ತೆ ಕೆಲವರು ನಿಧಾನವಾಗಿ ಮದ್ಯ ಸೇವಿಸುತ್ತಾರೆ. ಹೀಗೆ ಮದ್ಯ ಸೇವಿಸುವ ಸಂದರ್ಭದಲ್ಲಿ ಸೈಡ್ಸ್ ಇದ್ದರೆ ಚೆನ್ನಾಗಿರುತ್ತದೆ. ಹಾಗಾಗಿ ಕೆಲವರು, ಮದ್ಯ ಸೇವಿಸುವಾಗ ಚಿಪ್ಸ್ ಜೊತೆಗಿಟ್ಟುಕೊಂಡಿರುತ್ತಾರೆ. ಅಮೆರಿಕದಲ್ಲಿ ಏನಾಗಿದೆ ಎಂದರೆ, ಬಿಯರ್ ಲಾರಿ ಮತ್ತು ಆಲೂಗಡ್ಡೆ ಚಿಪ್ಸ್ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಫ್ಲೋರಿಡಾ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ರಸ್ತೆಯಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಡ್ ವೈಸರ್ ಬಿಯರ್ ಲಾರಿ, ಪೆಟ್ರೋ ಲೇಯ್ಸ್ ಚಿಪ್ಸ್ ಲಾರಿ ನಡುವೆ ಮುಖಾಮುಖಿಯಾಗಿದೆ. ಇದರಿಂದಾಗಿ ಬಿಯರ್ ಬಾಟಲಿ, ಟಿನ್ ಹಾಗೂ ಚಿಪ್ಸ್ ರಸ್ತೆ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕೆಲವರು ರುಚಿ ನೋಡಿದ್ದಾರೆ. ಬಳಿಕ ಆಗಮಿಸಿದ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...