alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಮುಂಬೈ, ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ಭಾರತದ ಆರ್ಥಿಕ ರಾಜಧಾನಿ ಮುಂಬೈ ವಿಶ್ವದ 15 ಶ್ರೀಮಂತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮುಂಬೈನ ಒಟ್ಟು ಸಂಪತ್ತು 950 ಬಿಲಿಯನ್ ಡಾಲರ್ ಅಂದ್ರೆ ಸುಮಾರು 61 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ನ್ಯೂ ವರ್ಲ್ಡ್ ವೆಲ್ತ್ ಇತ್ತೀಚಿಗೆ ನೀಡಿದ ವರದಿ ಪ್ರಕಾರ ನ್ಯೂಯಾರ್ಕ್ ಸುಮಾರು 193 ಲಕ್ಷ ಕೋಟಿ ಸಂಪತ್ತು ಹೊಂದಿದೆ.

ನ್ಯೂ ವರ್ಲ್ಡ್ ಹೆಲ್ತ್ ವರದಿ ಪ್ರಕಾರ, ನಗರದಲ್ಲಿ ವಾಸವಾಗಿರುವ ಜನರ ಖಾಸಗಿ ಸಂಪತ್ತನ್ನು ಸೇರಿಸಿ ಶ್ರೀಮಂತ ನಗರಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಇದ್ರಲ್ಲಿ ಸರ್ಕಾರದ ಹಣ ಸೇರ್ಪಡೆಯಾಗಿಲ್ಲ. ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲೂ ಮುಂಬೈ ವಿಶ್ವದ 10 ನಗರಗಳಲ್ಲಿ ಒಂದಾಗಿದೆ. ಮುಂಬೈನಲ್ಲಿ 28 ಶತಕೋಟ್ಯಾಧಿಪತಿಗಳಿದ್ದಾರೆ.

ಮುಂಬೈ ವಿಶ್ವದ 12ನೇ ಅತ್ಯಂತ ದೊಡ್ಡ ಸ್ಟಾಕ್ ಎಂಕ್ಸ್ಚೇಂಜ್ ಆಗಿದೆ. ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ನ್ಯೂಯಾರ್ಕ್ ಮೊದಲಿದ್ದರೆ ಎರಡನೇ ಸ್ಥಾನದಲ್ಲಿ ಲಂಡನ್ ಇದೆ. 12ನೇ ಸ್ಥಾನದಲ್ಲಿ ಮುಂಬೈ ಇದೆ. ಟೊರೊಂಟೊ 14 ಹಾಗೂ ಪ್ಯಾರಿಸ್ 15ನೇ ಸ್ಥಾನದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...