alex Certify
ಕನ್ನಡ ದುನಿಯಾ       Mobile App
       

Kannada Duniya

ದಾವೂದ್ ಗೆ ಸೇರಿದ 15,000 ಕೋಟಿ ಮೌಲ್ಯದ ಆಸ್ತಿ ಜಪ್ತಿ

559893-dawood-ibrahim

ಮುಂಬೈ ಸರಣಿ ಸ್ಫೋಟದ ರೂವಾರಿ, ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂಗೆ ಯುಎಇ ಶಾಕ್ ಕೊಟ್ಟಿದೆ. ಯುಎಇ ಸರ್ಕಾರ ದಾವೂದ್ ಗೆ ಸೇರಿದ 15,000 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ಯುಎಇಯಲ್ಲಿ ದಾವೂದ್ ಒಡೆತನದ ಹೋಟೆಲ್ ಗಳಿತ್ತು, ಹಲವು ಕಂಪನಿಗಳಲ್ಲೂ ಪಾತಕಿ ಶೇರು ಹೊಂದಿದ್ದ. ದುಬೈನಲ್ಲಿ ದಾವೂದ್ ಗೆ ಸೇರಿದ್ದ ಆಸ್ತಿಯನ್ನು ಸಹ ಯುಎಇ ವಶಪಡಿಸಿಕೊಂಡಿದೆ.

ಭಾರತದಿಂದ ರಹಸ್ಯ ಪಟ್ಟಿಯೊಂದು ಕೈಸೇರಿದ ಬಳಿಕ ಯುಎಇ ಸರ್ಕಾರ ದುಬೈನಲ್ಲಿರುವ ದಾವೂದ್ ಆಸ್ತಿ ಬಗ್ಗೆ ತನಿಖೆ ನಡೆಸಿತ್ತು. ಕಳೆದ ವರ್ಷ ಯುಎಇಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದ ಸಂದರ್ಭದಲ್ಲಿ ದಾವೂದ್ ಮತ್ತವನ ಸಹಚರರಿಗೆ ಸೇರಿದ ಆಸ್ತಿಯನ್ನೆಲ್ಲ ಜಪ್ತಿ ಮಾಡುವಂತೆ ಭಾರತ ಮನವಿ ಮಾಡಿತ್ತು. ದುಬೈನಲ್ಲಿದ್ದ ದಾವೂದ್ ಸಹೋದರನ ಕಂಪನಿ ಗೋಲ್ಡನ್ ಬಾಕ್ಸ್ ಸೇರಿದಂತೆ ಹಲವು ಆಸ್ತಿಪಾಸ್ತಿ ವಿವರವನ್ನು ಯುಎಇಗೆ ಹಸ್ತಾಂತರಿಸಿತ್ತು. ಕೇವಲ ದುಬೈ ಮಾತ್ರವಲ್ಲ ಮೊರಕ್ಕೋ, ಸ್ಪೇನ್, ಸಿಂಗಾಪುರ, ಥೈಲ್ಯಾಂಡ್, ಟರ್ಕಿ, ಪಾಕಿಸ್ತಾನ, ಭಾರತ ಮತ್ತು ಬ್ರಿಟನ್ ನಲ್ಲಿ ಕೂಡ ದಾವೂದ್ ಹೂಡಿಕೆ ಮಾಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...