alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟ್ಟ ಮಗ ಕಾಣೆಯಾಗಿ ಒಂದು ದಿನ ಕಳೆದ್ರೂ ತಾಯಿಗೆ ಗೊತ್ತೇ ಇರಲಿಲ್ಲ!

ಅಮೆರಿಕದ ಮಹಿಳೆಯೊಬ್ಬಳಿಗೆ ತನ್ನ 3 ವರ್ಷದ ಮಗ ಕಾಣೆಯಾಗಿರೋದು ಒಂದು ದಿನದ ಬಳಿಕ ಗಮನಕ್ಕೆ ಬಂದಿದೆ.

ಮನೆಯವರೆಲ್ಲ ಒಟ್ಟಾಗಿ ಹ್ಯಾಲೋವೀನ್ ಹಬ್ಬ ಆಚರಿಸಲು ತೆರಳಿದ್ರು. ಅಲ್ಲೇ ಆಟವಾಡುತ್ತಿದ್ದ 3 ವರ್ಷದ ಬಾಲಕ ತಪ್ಪಿಸಿಕೊಂಡುಬಿಟ್ಟಿದ್ದಾನೆ. ಆದ್ರೆ ಡೇ ಔಟ್ ನಲ್ಲಿ ಮೈಮರೆತಿದ್ದ ಮನೆಯವರಿಗೆ ಮಗು ಕಾಣೆಯಾಗಿರೋದು ಗೊತ್ತಾಗಿಲ್ಲ. ಮಗುವಿನ ತಾಯಿಗೆ ಕೂಡ ಮಗನ ನೆನಪಾಗಿಲ್ಲ. ಚಳಿಯಲ್ಲಿ ನಡುಗುತ್ತ ಅಳುತ್ತಿದ್ದ ಮಗುವನ್ನು ಪ್ರವಾಸಿಗರೊಬ್ಬರು ಗಮನಿಸಿದ್ರು. ಕೂಡಲೇ ತಮ್ಮ ಹೋಟೆಲ್ ಕೋಣೆಗೆ ಕರೆತಂದು ಬ್ಲಾಂಕೆಟ್ ಹೊದೆಸಿ, ಸಿನೆಮಾ ಹಾಕಿ ಕೂರಿಸಿದ್ರು.

ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಅರೆಸ್ಟ್ ಮಾಡುವವರೆಗೂ ಆ ಮಹಿಳೆಗೆ ತನ್ನ ಮಗ ನಾಪತ್ತೆಯಾಗಿರೋದು ಅರಿವಿಗೇ ಬಂದಿರಲಿಲ್ಲ. ಮಗುವಿನ ಬಗ್ಗೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ತಾಯಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸದ್ಯ ಮಗು ಮರಳಿ ತನ್ನ ಕುಟುಂಬ ಸೇರಿದೆ. ಅದೃಷ್ಟವಶಾತ್ ಮಗುವಿಗೆ ಅಪಾಯವಾಗಿಲ್ಲ. ಆದ್ರೆ ಮಗು ಕಾಣೆಯಾಗಿ ಒಂದು ದಿನವಾದ್ರೂ ಹೆತ್ತ ತಾಯಿಗೇ ಅದರ ಅರಿವಿಲ್ಲದೆ ಇರೋದು ನಿಜಕ್ಕೂ ವಿಪರ್ಯಾಸ ಎನ್ನುತ್ತಿದ್ದಾರೆ ಪ್ರಜ್ಞಾವಂತರು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...