alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ಪ್ರಾಣ ಉಳಿಸಲು ಮಹಾ ತ್ಯಾಗ ಮಾಡಿದ್ದಾಳೆ ಈ ತಾಯಿ

ಐರ್ಲೆಂಡ್ ನಲ್ಲಿ ಮಹಿಳೆಯೊಬ್ಬಳು ತನ್ನ ಮಗನನ್ನು ಉಳಿಸಿಕೊಳ್ಳಲು ಅಂಗಾಂಗ ದಾನ ಮಾಡಿದ್ದಾಳೆ.  ಒಂದು ಕಿಡ್ನಿ ಮತ್ತು ಲಿವರ್ ನ ಭಾಗವೊಂದನ್ನು ದಾನವಾಗಿ ನೀಡಿದ್ದಾಳೆ. ಒಂದು ವರ್ಷದ ಪುಟ್ಟ ಬಾಲಕ ಜೋ ಪಾಲಿಸಿಸ್ಟಿಕ್ ಕಿಡ್ನಿ ಖಾಯಿಲೆಯಿಂದ ಬಳಲುತ್ತಿದ್ದ. ಮಗುವಿಗೆ ಲಿವರ್ ಸಮಸ್ಯೆಯೂ ಇತ್ತು.

ಕಿಡ್ನಿಗಳು ದೊಡ್ಡದಾಗಿ ಊದಿಕೊಂಡಿದ್ರಿಂದ ಆತನ ಹೊಟ್ಟೆಯನ್ನು ಪೂರ್ತಿಯಾಗಿ ಆವರಿಸಿಕೊಂಡು, ಶ್ವಾಸಕೋಶವನ್ನೇ ನುಜ್ಜುಗುಜ್ಜು ಮಾಡುವ ಅಪಾಯವಿತ್ತು. ಮಗುವಿನ ಕಿಡ್ನಿಯನ್ನು ತೆಗೆದುಹಾಕಿ ಡಯಾಲಿಸಿಸ್ ನಲ್ಲಿಡಲಾಗಿತ್ತು. ನಂತರ ತಾಯಿ ಸಾರಾ ಲೆಮೊಂಟ್ ತನ್ನ ಒಂದು ಕಿಡ್ನಿಯನ್ನು ಮಗನಿಗೆ ದಾನ ಮಾಡಿದ್ದಾಳೆ.

ಅಮ್ಮನ ಕಿಡ್ನಿಯನ್ನು ತೆಗೆದು ಮಗನಿಗೆ ಕಸಿ ಮಾಡಲಾಗಿದೆ. ಈ ಸರ್ಜರಿ ನಡೆದು 7 ತಿಂಗಳುಗಳ ಬಳಿಕ ಮಗುವಿಗೆ ತನ್ನ ಲಿವರ್ ನ ಒಂದು ಭಾಗವನ್ನು ಕೂಡ ಸಾರಾ ದಾನ ಮಾಡಿದ್ದಾಳೆ. ಬರ್ಮಿಂಗ್ಹ್ಯಾಮ್ ನ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಅಮ್ಮ ಮತ್ತು ಮಗನಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಈಗ ಪುಟಾಣಿ ಜೋ ಸಂಪೂರ್ಣ ಚೇತರಿಸಿಕೊಂಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...