alex Certify
ಕನ್ನಡ ದುನಿಯಾ       Mobile App
       

Kannada Duniya

ಗುಣಮುಖರಾದ್ರೂ ಆಸ್ಪತ್ರೆಯಿಂದ ತೆರಳುತ್ತಿಲ್ಲ ತಾಯಿ-ಮಗಳು

ಯಾರಾದರೂ ಆಸ್ಪತ್ರೆಗೆ ದಾಖಲಾದರೆ ಅಲ್ಲಿಂದ ಬೇಗ ಡಿಸ್‍ಚಾರ್ಜ್ ಆಗಿ ಮನೆಗೆ ಹೋದರೆ ಸಾಕಪ್ಪ ಎಂದುಕೊಳ್ಳುತ್ತಿರುತ್ತಾರೆ. ಅದರೆ ಇಲ್ಲೊಬ್ಬ ತಾಯಿ-ಮಗಳು ಆಸ್ಪತ್ರೆಯನ್ನೇ ಮನೆ ಥರ ಮಾಡಿಕೊಂಡು, ಅಲ್ಲೇ ವಾಸವಾಗಿದ್ದಾರೆ.

ಲಂಡನ್‍ ನ ಗ್ರಿಮ್ಸ್‍ಬಿ ನಿವಾಸಿಗಳಾದ ಮಿಮಿ ಟೆಬೆಜೆ ಹಾಗೂ ಆಕೆಯ ಮಗಳು ರುತ್ ಕಿಡೇನ್ ಅವರೇ ಈ ವಿಚಿತ್ರ ಜೋಡಿ. ಸ್ನಾಯು ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿದ್ದ ರುತ್ 15 ತಿಂಗಳ ಹಿಂದೆ ರಾಯಲ್ ಫ್ರೀ ಹಾಸ್ಪಿಟಲ್ ಟ್ರಸ್ಟ್ ನಡೆಸುತ್ತಿರುವ ಬಾರ್ನೆಟ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಮಗಳ ಆರೈಕೆಗೆಂದು ಬಂದಿದ್ದ ತಾಯಿ, ಜನರಲ್ ವಾರ್ಡ್‍ನ ಪಕ್ಕದ ಬೆಡ್ ಪಡೆದುಕೊಂಡಿದ್ದಾರೆ. ಇದೀಗ ರುತ್ ಗುಣಮುಖಳಾಗಿದ್ದರೂ ಇಬ್ಬರೂ ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಲು ಒಪ್ಪದಿರುವುದು ವಿವಾದಕ್ಕೀಡಾಗಿದೆ.

ಗ್ರಿಮ್ಸ್‍ಬಿನಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ಇವರಿಬ್ಬರು ವಾಸವಿದ್ದರು. ಆದರೆ ಇವರು ಮರಳದ ಕಾರಣ ಅದರಲ್ಲೀಗ ಬೇರೆಯವರು ವಾಸವಿದ್ದಾರೆ. ಮತ್ತೊಂದೆಡೆ ಆಸ್ಪತ್ರೆಯ ಆಡಳಿತ ಮಂಡಳಿ ಕ್ರಮಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ. ಜನಾಂಗೀಯ ದೌರ್ಜನ್ಯದ ಕಾರಣ ತಾವು ಹೋಗುತ್ತಿಲ್ಲ ಎಂಬ ಸಬೂಬನ್ನು ಈ ತಾಯಿ-ಮಗಳು ಹೇಳುತ್ತಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...